ಉಡುಪಿ: ಪಡುಕುಡೂರು ಎಂ.ಡಿ. ಅಧಿಕಾರಿ ಯೂತ್ ಕ್ಲಬ್ ಮತ್ತು ಪಡುಕುಡೂರು ಸ.ಹಿ.ಪ್ರಾ. ಶಾಲೆ ಇವರ ಜಂಟಿ ಆಶ್ರಯದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ವಾತಂತ್ರ್ಯ ಸೇನಾನಿ ಪಡುಕುಡೂರು ಬೀಡು ಎಂ.ಡಿ. ಅಧಿಕಾರಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಆ. ೧೫ರಂದು ಜರಗಲಿದೆ.
ಬೆಳಿಗ್ಗೆ ಎಂ.ಡಿ. ಅಧಿಕಾರಿ ಪ್ರತಿಮೆಗೆ ಮಾಲಾರ್ಪಣೆ, ಧ್ವಜಾರೋಹಣ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ನೃತ್ಯ ಕಾರ್ಯಕ್ರಮ ಬಳಿಕ ಮಕ್ಕಳಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.