ಪಡುಮಾರ್ನಾಡು ಗ್ರಾಮದ ಮುನ್ನೇರು ಪ್ರದೇಶದ ನಿವಾಸಿ ಬಾಲಕೃಷ್ಣ ಶೆಟ್ಟಿ (38) ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತೆರಡುವಾಗ ಮಳೆಗಾಳಿಯ ಮಧ್ಯೆ ಕತ್ತಲಲ್ಲಿ ಆವರಣ ರಹಿತ ಬಾವಿಗೆ ಬಿದ್ದಿರುವ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇಂದು ಆತನ ಮೃತ ದೇಹ ಬಾವಿಯಲ್ಲಿ ನೀರಿನಲ್ಲಿ ತೇಲಾಡುತ್ತಿರುವುದು ಕಂಡುಬಂದಿರುತ್ತದೆ. ಹೆಚ್ಚಿನ ವಿವರಗಳು ಲಭ್ಯವಿಲ್ಲ.
ವರದಿ ರಾಯಿ ರಾಜ ಕುಮಾರ

