ಪಕ್ಷಿಕೆರೆ : ಜಿಲ್ಲಾ ಪ್ರಶಸ್ತಿ ವಿಜೇತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ.) ಪಕ್ಷಿಕೆರೆ ಮತ್ತು ಶ್ರೀ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ ಇದರ ಜಂಟಿ ಆಶ್ರಯದಲ್ಲಿ My Bharat D.K, Ministry Of Youth Affairs And Sports Govt Of India, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರಿಕ್ಷಾ ಚಾಲಕರ ಮಾಲಕರ ಸಂಘ ಚರ್ಚ್ ನಿಲ್ದಾಣ ಮತ್ತು ಪಕ್ಷಿಕೆರೆ ಇವರ ಸಹಯೋಗದಲ್ಲಿ ಸೈಬರ್ ಅಪರಾಧ ಮಾಹಿತಿ ಕಾರ್ಯಕ್ರಮ ಪಕ್ಷಿಕೆರೆ ಪೇಟೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅನಿತಾ ಪೊಲೀಸ್ ಉಪ ನಿರೀಕ್ಷಕರು ಮೂಲ್ಕಿ ಪೊಲೀಸ್ ಸ್ಟೇಷನ್ ಇವರು ನೆರವೇರಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮೈಯದ್ದಿ- ಅಧ್ಯಕ್ಷರು ಕೆಮ್ರಾಲ್ ಗ್ರಾಮ ಪಂಚಾಯತ್ ಇವರು ವಹಿಸಿದ್ದರು. ಮಂಜುನಾಥ್ ಬಿ. ಎಸ್. ಪೊಲೀಸ್ ಇನ್ಸ್ಪೆಕ್ಟರ್ ಮೂಲ್ಕಿ ಅವರು ಸೈಬರ್ ಅಪರಾದದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಮೇಶ್ ಪೊಲೀಸ್ ಸಹ ಉಪ ನಿರೀಕ್ಷಕರು, ರೋ. ಧನಂಜಯ್ ಪಿ. ಶೆಟ್ಟಿಗಾರ್ ಗೌರವಾಧ್ಯಕ್ಷರು ಶ್ರೀ ವಿನಾಯಕ ಮಿತ್ರ ಮಂಡಳಿ ಮತ್ತು ಅಧ್ಯಕ್ಷರು ರೋಟರಿ ಕ್ಲಬ್ ಕಿನ್ನಿಗೋಳಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಕ್ಷಿಕೆರೆ ಅಧ್ಯಕ್ಷರಾದ ಗಣಪತಿ ಆಚಾರ್ಯ, ರಿಕ್ಷಾ ಚಾಲಕರ ಮಾಲಕರ ಸಂಘ ಪಕ್ಷಿಕೆರೆ ಅಧ್ಯಕ್ಷರಾದ ಜಗದೀಶ್, ಶ್ರೀ ವಿನಾಯಕ ಮಹಿಳಾ ಮಂಡಳಿ ಅಧ್ಯಕ್ಷೆಯಾದ ಸರಸ್ವತಿ ದಾಸ್, ಮಂಡಳಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿಗಾರ್ ಹಾಗೂ ಕಾರ್ಯದರ್ಶಿ ನಮಿತ್ ಉಪಸ್ಥಿತರಿದ್ದರು. ಮಂಡಳಿಯ ಸದಸ್ಯರಾದ ನರೇಶ್ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಳಿ ಸದಸ್ಯೆಯಾದ ಕುಶಲ ಎಸ್. ಕುಕ್ಯಾನ್ ಧನ್ಯವಾದ ಸಮರ್ಪಿಸಿದರು. ಮಂಡಳಿಯ ಸದಸ್ಯರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದರು.