ಪಕ್ಷಿಕೆರೆ : ಅತ್ತೂರು ಹಾಲಿನ ಡೈರಿ ಬಳಿ ಚಿರತೆ ಸಂಚಾರ

0
15

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ತೂರು ಹಾಲಿನ ಡೈರಿ ಬಳಿ ಚಿರತೆಯೊಂದು ಬೈಕ್ ಸವಾರಿಗೆ ಕಾಣಸಿಕ್ಕಿದೆ. ಪಂಜ ಹರಿಪಾದೆಯ ಸಂತೋಷ್ ಮತ್ತು ಶಶಿಕುಮಾರ್ ಸಹೋದರರು ಕಟೀಲು ದೇವಸ್ಥಾನಕ್ಕೆ ಬೇಟಿ ನೀಡಿ ವಾಪಾಸ್ಸಾಗುವಾಗ ಸುಮಾರು ರಾತ್ರಿ 8.00 ಗಂಟೆಗೆ ಅತ್ತೂರು ಹಾಲಿನ ಡೈರಿ ಬಳಿ ಚಿರತೆ ರಸ್ತೆ ದಾಟುತಿರುವುದನ್ನು ನೋಡಿದ್ದು, ಕೂಡಲೇ ಸ್ಥಳಿಯರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪಂಚಾಯತ್ ಸದಸ್ಯೆ ಜಯಂತಿ ಶೆಟ್ಟಿಯವರು ಸ್ಥಳಿಯ ಎಲ್ಲಾ ಜನರಿಗೆ ಕರೆ ಮಾಡಿ ಮನೆಯಿಂದ ಹೊರಬರದಂತೆ ಜಾಗ್ರತೆ ವಹಿಸುವಂತೆ ತಿಳಿಸಿದ್ದಾರೆ, ಕೂಡಲೇ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಬೆಳಿಗ್ಗೆ ಹಾಲಿನ ಡೈರಿ ಬಳಿ ಚಿರತೆಯ ಕಾಲಿನ ಹೆಜ್ಜೆ ಗುರುತು ಕಾಣಸಿಕ್ಕಿದ್ದು , ಇದೀಗ ಸ್ಥಳೀಯರು ಭಯಭೀತರಾಗಿದ್ದಾರೆ.

LEAVE A REPLY

Please enter your comment!
Please enter your name here