ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲಡ್ಕದಲ್ಲಿ ಸ್ಮಾರ್ಟ್ ಟಿವಿ ಬಿಡುಗಡೆ

0
9

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರು ಪೂಜ್ಯ ಡಾ: ಡಿ ವಿರೇಂದ್ರ ಹೆಗ್ಡೆ ರವರು ಸಂಸದರ ನಿಧಿಯಿಂದ ಮಂಜೂರು ಮಾಡಿದ 1,45,000 ಮೌಲ್ಯದ ಸ್ಮಾರ್ಟ್ ಟಿವಿ ಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲಡ್ಕದಲ್ಲಿ ಬಿಡುಗಡೆ ಮಾಡಲಾಯಿತು.

ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ: ಗ್ರಾಮೀಣ ಭಾಗದ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಶಿಕ್ಷಣ ಲಭಿಸುವಂತಗಬೇಕು ಎನ್ನುವುದು ಪೂಜ್ಯರ ಆಶಯವಾಗಿದೆ ಈ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯು ಮಕ್ಕಳ ಜ್ಞಾನಾರ್ಜನೆಗೆ ಹೊಸ ಆಯಾಮ ನೀಡಲಿದೆ ಎಂದರು.

ಮುಖ್ಯ ಶಿಕ್ಷಕರು ಶ್ಯಾಮಲ ಪಿ,ರವರು ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆದುನಿಕ ಶಿಕ್ಷಣಕ್ಕೆ ಪೂರಕವಾಗಿ ತಾವು ನೀಡಿದ ಈ ಕೊಡುಗೆಯು ಶೇಕ್ಷಣಿಕ ಅಭಿವೃದ್ಧಿಗೆ ಬಹಳ ಸಹಕರಿಯಾಗಿದೆ ತಮ್ಮ ಈ ಸಮಾಜಮುಖಿ ಕಾರ್ಯಕ್ಕೆ ಶಿಕ್ಷಣ ಮೇಲಿನ ಕಾಳಜಿಗೆ ನಾವು ಸದಾ ಋಣಿಯಾಗಿದ್ದೇವೆ ಎಂದರು.

ಕಾರ್ಯಕ್ರಮ ದಲ್ಲಿ ಶಾಲಾ SDMC ಅಧ್ಯಕ್ಷರು ಪ್ರೀತ ಕುಮಾರ್ ಪಾಲಡ್ಕ ಒಕ್ಕೂಟ ಅಧ್ಯಕ್ಷರು ಕುಸುಮಾವತಿ ಶಾಲಾ ಮುಖ್ಯ ಶಿಕ್ಷಕರು,ಗುರು,ಶುಭಲತಾ, ಪುಷ್ಪವತಿ, ಲೀನಾ ವೇಗೌಸ್ ಶ್ರದ್ದಾ,,ಸೇವಾಪ್ರತಿನಿಧಿ ನಂದಿನಿ ಹಾಗೂ,ಪಾಲಕರು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here