ಮಂಗಳೂರು: ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ (ರಿ.) ಪಡುಪೆರಾರ ಇವರ ಸಹಯೋಗದಲ್ಲಿ ಪಂವದರ ಯಾನೆ ದೈವಾದಿಗರ ಸಮಾಜ ಸಂಘ(ರಿ.) ಗಂಧಕಾಡು ಪದವಿನಂಗಡಿ ಇವರ ಜಂಟಿ ಆಶ್ರಯದಲ್ಲಿ ಹಾಗೂ ತುಳುವ ಬೊಳ್ಳಿ ಪ್ರತಿಷ್ಠಾನ ಸಂಘಟನೆ ವತಿಯಿಂದ ಪಂಬದರ ಕೂಡುಕಟ್ಟ್ ಸಿರಿಮುಡಿ ಕಾರ್ಯಕ್ರಮ ಪಂಬದರ ಬಿರ್ದ್, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಪೋಷಕರಿಗೆ ಗೌರವ ಸನ್ಮಾನ ಗಣ್ಯರ ಸಮ್ಮುಖದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವಿಚಾರಗೋಷ್ಟಿಯೊಂದಿಗೆ ಸಪ್ಟೆಂಬರ್ 7 ಬೆಳಿಗ್ಗೆ 8 ಗಂಟೆಯಿಂದಮಧ್ಯಾಹ್ನ 2 ಗಂಟೆವರೆಗೆ ಪುರಭವನ ಮಂಗಳೂರಿನಲ್ಲಿ ನಡೆಯಲಿದೆ.
ಸಮುದಾಯದವರಿಗೆಲ್ಲಾ ಉಚಿತ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಅಪಘಾತ ವಿಮೆ, ಅಯುಷ್ಮಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಕೂಡ ಉಚಿತವಾಗಿ ಲಭಿಸಲಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಮಂಗಳೂರು ಅರ್ಪಿಸುವ ಪಾಡ್ದನ ಆಧಾರಿತ ಪರಮಾತ್ಮ ಪಂಜುರ್ಲಿ ಪೌರಾಣಿಕ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

