ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಕಾಮರ್ಸ್ ಅಸೋಸಿಯೇಷನ್ ವತಿಯಿಂದ ಸಿ.ಎ. ದಿನಾಚರಣೆಯನ್ನು ಆಚರಿಸಲಾಯಿತು. ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ಮತ್ತು ಸಿ ಎಸ್ ಇ ಇ ಟಿ ಮಾಹಿತಿಯನ್ನು ಒಳಗೊಂಡ ಕಾರ್ಯಾಗಾರ ನಡೆಸಲಾಯಿತು. ಸಿ.ಎ. ದಾಮಿನಿ ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ , ಸಿ.ಎ. ಪೂರ್ಣಗೊಳಿಸಿದವರಿಗೆ ಇಂದು ನಮ್ಮ ದೇಶದಲ್ಲಿ ಅದ್ಭುತ ಉದ್ಯೋಗಾವಕಾಶಗಳಿವೆ.
ಜೊತೆಗೆ ಸಮಾಜದಲ್ಲಿ ಸಾಕಷ್ಟು ಗೌರವ ಕೂಡ ಸಿಗುತ್ತಿದೆ. ಹಾಗಾಗಿ ತಾವುಗಳು ಜೀವನದಲ್ಲಿ ಉನ್ನತ ಗುರಿಯನ್ನು ಇಟ್ಟುಕೊಂಡು ಸಿಎ ಮತ್ತು ಸಿ.ಎಸ್. ಕೋರ್ಸ್ ಗಳನ್ನು ಮಾಡುವುದರ ಬಗ್ಗೆ ಗಮನಹರಿಸಿ ಎಂದರು. ಕಾಲೇಜು ಪ್ರಾಂಶುಪಾಲರಾದ ಪ್ರಕಾಶ್ ಜೋಗಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಿಎ , ಸಿಎಸ್ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪಿಪಿಟಿ ಶೋ ಮೂಲಕ ಕೋರ್ಸುಗಳ ಮಾಹಿತಿ ಮತ್ತು ತಮ್ಮ ಅನುಭವವನ್ನು ಹಂಚಿಕೊಂಡರು. ಕಾಮರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿನಯ್ ಶೆಣೈ ಕಾರ್ಯಕ್ರಮ ನಿರೂಪಿಸಿ , ಸುಮಿತಾ ಸ್ವಾಗತಿಸಿ , ಪ್ರಥ್ವಿ ವಂದಿಸಿದರು