ಐಐಎಸ್ಸಿಯಲ್ಲಿ ಪಂಕಜ್ ಸೆಕ್ಯೂರಿಟಿ ಗುತ್ತಿಗೆದಾರರು, ಸಿಬ್ಬಂದಿ ವಿರುದ್ಧ ಅಪ ಪ್ರಚಾರ: ಆರೋಪಮುಕ್ತಗೊಳಿಸಿದ ಡಿಸಿಆರ್ ಇ

0
70


ಬೆಂಗಳೂರು: ಭಾರತೀಯ ವಿಜ್ಞಾನ ಮಂದಿರ ಐಐಎಸ್ಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಕಜ್ ಸೆಕ್ಯೂರಿಟಿ ಸರ್ವೀಸಸ್ ಎಂಬ ಗುತ್ತಿಗೆದಾರರ ವಿರುದ್ಧ ಸಾಮಾಜಿಕ ಮಾಧ್ಯಮ, ವಾಟ್ಸ್ ಅಪ್ ಹಾಗೂ ನೋಂದಣಿಯಾಗದ ಪತ್ರಿಕೆ ಮುಖೇನ ಅಪ ಪ್ರಚಾರ ನಡೆಸಿದ್ದು, ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ – ಡಿಸಿಆರ್ಇ ಗುತ್ತಿಗೆದಾರರನ್ನು ಆರೋಪಮುಕ್ತಗೊಳಿಸಿದೆ.
ಪಂಕಜ್ ಸೆಕ್ಯೂರಿಟಿ ಸರ್ವೀಸ್ ಪ್ರತಿನಿಧಿಯಾದ ಹೇಮಂತ್ ಕುಮಾರ್ [ಹೇಮಂತ್ ಕೃಷ್ಣ], ಹಾಗೂ ಐಐಎಸ್ಸಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕ ರಿಜಿಸ್ಟ್ರಾರ್ ವಸಂತನ್ ಹಾಗೂ ಭದ್ರತಾ ಕಚೇರಿಯ ಸಹಾಯಕ ರಿಜಿಸ್ಟರ್ ಜಯರಾಜ್ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ.
ಪಂಕಜ್ ಸೆಕ್ಯೂರಿಟಿ ಸರ್ವೀಸ್ ವಿರುದ್ಧ ಅಕ್ಟೋಬರ್ 13 ರಂದು ಅಪ ಪ್ರಚಾರ ನಡೆಸಲಾಗಿತ್ತು ಎಂದು ಹೇಮಂತ್ ಕುಮಾರ್ ಎಂಬವರು ನೀಡಿದ್ದ ದೂರಿನ ಬಗ್ಗೆ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಪಂಕಜ್ ಸಕ್ಯೂರಿಟಿ ಸರ್ವೀಸಸ್ ಸಂಸ್ಥೆಯ ಮುಖ್ಯಸ್ಥರ ಮೇಲೆ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದೆ.
ಐಐಎಸ್ಸಿ ಹೌಸ್ ಕೀಪಿಂಗ್ ಗುತ್ತಿಗೆಯನ್ನು ಆನ್ ಲೈನ್ ಟೆಂಡರ್ ಮುಖಾಂತರ ಪಂಕಜ್ ಸಕ್ಯೂರಿಟಿ ಸರ್ವೀಸಸ್ ಸಂಸ್ಥೆ ಪಡೆದುಕೊಂಡಿದ್ದು, ಇ.ಎಸ್.ಐ, ಪಿಎಫ್, ಜಿ.ಎಸ್.ಟಿ ಸೇರಿ ಎಲ್ಲಾ ನಿಯಮಗಳನ್ನು ಸಂಸ್ಥೆ ಪರಿಪಾಲಿಸುತ್ತಿದೆ. ಜೊತೆಗೆ ಗುತ್ತಿಗೆ ಅವಧಿಯನ್ನು ಐಐಎಸ್ಸಿ ನವೀಕರಣ ಮಾಡಿದೆ. ಇದನ್ನು ಸಹಿಸದ ಕಿಡಿಗೇಡಿಗಳು ಕೆಲಸ ನೀಡಲು ನಾವು ಲಂಚ ಪಡೆಯುತ್ತಿದ್ದೇವೆ ಎಂದು ಅಪ ಪ್ರಚಾರ ಮಾಡಿದ್ದರು. ನೋಂದಣಿಯಾಗದ ಪತ್ರಿಕೆಯ ಹೆಸರನ್ನು ಬಳಸಿ ಕಂಪ್ಯೂಟರ್ ನಲ್ಲಿ ಪತ್ರಿಕೆಯ ಪ್ರತಿರೂಪವನ್ನು ಸೃಷ್ಟಿಸಿ ವರದಿ ಮಾಡಿ ವಾಟ್ಸ್ ಅಫ್ ಮುಖಾಂತರ ಹರಿಬಿಟ್ಟಿದ್ದರು. ಗುತ್ತಿಗೆದಾರರು ಮತ್ತು ಐಐಎಸ್ಸಿ ಸಿಬ್ಬಂದಿ ಸಹಾಯಕ ರಿಜೀಸ್ಟರ್ ವಸಂತನ್ (ಸಿಎಂಸಿ) ಹಾಗೂ ಸಹಾಯಕ ರಿಜೀಸ್ಟರ್ ಜಯರಾಜ್ (ಸೆಕ್ಯೂರಿಟಿ) ಅವರ ಸರ್ಕಾರಿ ಕೆಲಸಕ್ಕೆ ಕುಂದು ತರುವ, ವರ್ಗಾವಣೆ ಮಾಡಲು ಮತ್ತು ಪಂಕಜ್ ಸೆಕ್ಯೂರಿಟಿ ಸರ್ವೀಸಸ್ ಯಾವುದೇ ಟೆಂಡರ್ ನಲ್ಲಿ ಭಾಗವಹಿಸದಂತೆ ತಡೆಯಲು ಸ್ಥಳೀಯ ನೌಕರರು ಹಾಗೂ ಹಲವಾರು ಬಾಂಡಲಿ ವೀರರು ಷಡ್ಯಂತ್ರ ರೂಪಿಸಿದ್ದಾರೆ. ತಮ್ಮ ಮೇಲೆ ಮಾಡಿದ್ದ ಭ್ರಷ್ಟಾಚಾರದ ಆರೋಪ ಇದೀಗ ತಿರಸ್ಕೃತಗೊಂಡಿದೆ ಎಂದು ಹೇಮಂತ್ ಕುಮಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here