ಪರ್ಕಳ : ಮೌನ ಸೇವೆಗೆ “Salute the Silent Star” ಗೌರವ

0
6

ಜೇಸಿಐ ಪರ್ಕಳ ವತಿಯಿಂದ ಸಮಾಜದಲ್ಲಿ ಮೌನವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ “Salute the Silent Star” ಕಾರ್ಯಕ್ರಮವು ಮಾರ್ಚ್ 12 ರಂದು ಪರ್ಕಳದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು JCI ಪರ್ಕಳದ ಅಧ್ಯಕ್ಷರಾದ Jc ಭರತ್ ಕೆ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ Jc ಕಾಶಿನಾಥ್ ಗೊಗಟೆ (ZVP, Zone-15, JCI India) ಹಾಗೂ Jc ಸ್ವರಾಜ್ ಶೆಟ್ಟಿ (Zone Director – PR & Marketing) ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಬ್ಯಾಡಿ ವಿಷ್ಣುಪ್ರಿಯ ನಗರದ ನಿವಾಸಿ ಶ್ರೀಮತಿ ಮಾಲತಿ ಸುರೇಶ್ ನಾಯ್ಕ್ ಅವರನ್ನು ಅವರ ಸಮಾಜಮುಖಿ ಸೇವೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಸಲ್ಲಿಸಿದ ಕೊಡುಗೆಯನ್ನು ಗುರುತಿಸಿ “Salute the Silent Star” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಲತಿ ಸುರೇಶ್ ನಾಯ್ಕ್ ಅವರು ಆತ್ರಾಡಿಯಲ್ಲಿ ಬ್ರಾಹ್ಮರಿ ಹೊಲಿಗೆ ತರಬೇತಿ ಕೇಂದ್ರ ಸ್ಥಾಪಿಸಿ ಸುಮಾರು 1800 ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮಹತ್ವದ ಸೇವೆ ಸಲ್ಲಿಸಿದ್ದಾರೆ. ಇವರು ಸಂಜೀವಿನಿ ಗ್ರಾಮಮಟ್ಟದ ಒಕ್ಕೂಟದ ಅಧ್ಯಕ್ಷೆಯಾಗಿ ಹಾಗೂ ತಾಲೂಕು ಒಕ್ಕೂಟದ ಉಪಾಧ್ಯಕ್ಷೆಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಜೇಸಿಐ ಪರ್ಕಳದ ಸದಸ್ಯರು, ಪೂರ್ವಾಧ್ಯಕ್ಷರು ಹಾಗೂ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here