ಚಲೋ ಕಾರ್ಡ್ ಮೆಷೀನ್ ಮೂಲಕ ಮೊಬೈಲ್ ನಿಂದ ನೇರ ಪಾವತಿಗೆ ಪ್ರಯಾಣಿಕರಿಗೆ ಅವಕಾಶ

0
31

ವರದಿ ರಾಯಿ ರಾಜ ಕುಮಾರ

ಮುಡುಬಿದಿರೆಯಿಂದ ಚಲಿಸುವ ಎಲ್ಲಾ ಮಾರ್ಗದ ಬಸ್ಸುಗಳಲ್ಲಿಯೂ ಉಪಯೋಗಿಸಲ್ಪಡುತ್ತಿರುವ ಚಲೋ ಕಾರ್ಡ್ ನ ಮೆಷೀನ್ ಮೂಲಕ ಪ್ರಯಾಣಿಕರು ಮೊಬೈಲ್ ಮೂಲಕ ನೇರವಾಗಿ ಹಣವನ್ನು ಸಂದಾಯ ಮಾಡಿ ಪ್ರಯಾಣಿಸಬಹುದಾಗಿದೆ.

ರಾಜ್ಯದ ಕೆಲವಾರು ಜಿಲ್ಲೆಗಳಲ್ಲಿ ಮಾತ್ರ ಸಾಧ್ಯವಿದ್ದ ಈ ಸೌಲಭ್ಯ ಇದೀಗ ಮೂಡುಬಿದಿರೆಯ ಬಸ್ಸುಗಳಲ್ಲಿಯೂ ಲಭ್ಯವಿದೆ ಎಂದು ಚಲೋ ಕಾರ್ಡ್ ನವರು ತಿಳಿಸಿರುತ್ತಾರೆ. ಮೂಡುಬಿದಿರೆ ನಿಶ್ಮಿತಾ ಟವರ್ಸ್ ನಲ್ಲಿ ನಡೆದ ಬಸ್ಸು ಮಾಲಕರ ಸಂಘದ ಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಲಾಯಿತು.

ವಿಷಯದ ವಿವರಣೆಯನ್ನು ತಿಳಿಸಿದ ಮೂಡುಬಿದಿರೆ ಬಸ್ಸು ಮಾಲಕರ ಸಂಘದ ಅಧ್ಯಕ್ಷ ನಾರಾಯಣ ಪಿಎಂ ಅವರು ಪ್ರಯಾಣಿಕರಿಗೆ ಚಿಲ್ಲರೆಯ ತೊಂದರೆಯೂ ಇದರಿಂದ ದೂರವಾಗಿ, ಕೇವಲ ಮೊಬೈಲ್ ಮೂಲಕ ಇತರ ವಹಿವಾಟಿನಂತೆಯೇ ಇದನ್ನು ಮಾಡಬಹುದಾದ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ, ತಾಲೂಕು ಸಂಘದ ಕಾರ್ಯದರ್ಶಿ ಪ್ರಕಾಶ್ ಸಫಲಿಗ, ಖಜಾಂಚಿ ಶಶಿ ಅಮೀನ್, ಮ್ಯಾಕ್ಸಿಮ್ ಪಿಂಟೋ,ಖಾಲಿಕ್ ಅರ್ರಾಡಿ, ಮಹಮ್ಮದ್ ಶಕೀರ್, ಶಾಹಿಲ್ ರಾಜ್, ಉರಾಬ್ ಜಾನೆಟ್, ಸಂತೋಷ್ ಕೆ, ಪುನೀತ್, ರೊನಾಲ್ಡ್, ಮೊಹಮ್ಮದ್ ಮಾಟಿನ್, ಮಹಮ್ಮದ್ ಫಿರೋಜ್, ಹಾಗೂ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here