ದೇಶಭಕ್ತಿ ಗೀತೆ ರಾಷ್ಟ್ರಪ್ರೇಮ ಬೆಳೆಸಿದರೆ ಕವನ ವಾಚನ ಸೃಜನಶೀಲತೆ ಮೈಗೂಡಿಸುತ್ತದೆ: ಸುಭಾಷ್ ಚವ್ಹಾಣ

0
17

ದೇಶ ಭಕ್ತಿ ಗೀತೆ ಗಾಯನವು ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಹಾಗೂ ಕವನ ವಾಚನವು ಅಭಿವ್ಯಕ್ತಿ ಸಾಮರ್ಥ್ಯ ವರ್ದಿಸುತ್ತದೆ ಮತ್ತು ಕವನ ರಚನೆಯು ನಾಡು ನುಡಿ ಅಭಿಮಾನ ಮತ್ತು ಸೃಜನಶೀಲ ಮೌಲ್ಯ ಬೆಳೆಸುತ್ತದೆ ಎಂದು ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ ಹೇಳಿದರು. 19 ನವೆಂಬರ್ 2025 ರ ಬುಧವಾರ ಸಂತ ಸಮರ್ಟಿಯನ್ ಶಾಲೆಯಲ್ಲಿ ಆಯೋಜನೆಯಾಗಿದ್ದ ಆನಂದನಗರ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಗಾಯನ ಮತ್ತು ಕವನ ವ ವಚನ ವಾಚನ ಸ್ಪರ್ಧೆಯ ನಿರ್ಣಾಯಕರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ನುಡಿಗಳನ್ನು ಆಡುತ್ತಿದ್ದರು. ಸಾಲಮರದ ತಿಮ್ಮಕಳ ಜೀವನ ವೃತ್ತಾಂತ ಬಿಂಬುಸುವ ತಮ್ಮ ಸ್ವರಚಿತ ಕವನ ವಾಚಿಸಿ ಕವನ ವಾಚನೆಯ ನೀತಿ ನಿಯಮಗಳನ್ನು ಹಾಗೂ ಹಾಡಿನ ರೀತಿ ನೀತಿಗಳನ್ನು ತಿಳಿಸಿದರು.5 ರಿಂದ 7 ನೇ ತರಗತಿಯ ಪ್ರಾಥಮಿಕ ಶಾಲಾ ವಿಭಾಗದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಆರೂಢ ಅಂಧ ಶಾಲೆಯ ಸುಮಾ ಬೂದಣ್ಣವರ ಪ್ರಥಮ, ಸಹಿಪ್ರಾಶಾಲೆ ಮಂಜುನಾಥ ನಗರದ ಸೋಮೇಶ ಕೆರಣ್ಣವರ ಮತ್ತು ವಿದ್ಯಾನಿಕೇತನ ಶಾಲೆಯ ಸಿಂಚನಾ ಕರೆಸಿರಿ ದ್ವೀತಿಯ ಸ್ಥಾನ ಹಾಗೂ ಸುಜ್ಞಾನ ಶಾಲೆಯ ಸಾನ್ವಿ ಹೆಬ್ಬಳ್ಳಿ ತೃತೀಯ ಸ್ಥಾನ ಪಡೆದರು. ಬಹು ತುರುಸಿನ ಸ್ಪರ್ಧೆಯಲ್ಲಿ ಸರಕಾರಿ, ಅನುದಾನಿ ಮತ್ತು ಅನುದಾನ ರಹಿತ 16 ಶಾಲೆಯ ಮಕ್ಕಳು ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರಸ್ತುತ ಪಡಿಸಿದರು.5 ರಿಂದ 7 ನೇ ತರಗತಿ ಕವನ ವಾಚನ ಸ್ಪರ್ಧೆಯಲ್ಲಿ ಸಹಿಪ್ರಾಶಾಲೆ ಹೆಗ್ಗೇರಿಯ ಜೀವಿಕಾ ಪಾಟೀಲ ಪ್ರಥಮ, ಸಹಿಪ್ರಾಶಾಲೆ ಮಂಜುನಾಥ ನಗರದ ಸ್ನೇಹಾ ಕಿಳ್ಳಿಕ್ಯಾತರ ದ್ವೀತಿಯ ಮತ್ತು ಮನ್ವಂತರ ಶಾಲೆಯ ಸಾನಿಯಾ ಭೀಮಕರ ತೃತೀಯ ಸ್ಥಾನ ಪಡೆದರು. 8 ರಿಂದ 12ನೇ ತರಗತಿ ಕವನ ವಾಚನ ಸ್ಪರ್ಧೆಯಲ್ಲಿ ರಾಣಿ ಚೆನ್ನಮ್ಮ ಶಾಲೆಯ ಸ್ವಾತಿ ಕೋಪರ್ಡೆ ಪ್ರಥಮ, ವಿದ್ಯಾ ನಿಕೇತನ ಶಾಲೆಯ ಜನನಿ ಬಾವಿ ದ್ವೀತಿಯ, ಜೀಹ್ವೆಶ್ವರ ಶಾಲೆಯ ದೀಪಾ ರಜಪೂತ ತೃತೀಯ ಸ್ಥಾನ ಪಡೆದರು.ಸ್ಪರ್ಧಾ ನಿರ್ಣಾಕರಾದ ಮತ್ತೊರ್ವ ಶಿಕ್ಷಕಿ ಬಿ. ಜಿ. ಹಿರೇಮಠ ಕುವೆಂಪು ರವರ ಕವನದ ಮಾದರಿ ವಾಚನ ಮಾಡಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಮೋತಿಲಾಲ್ ರಾಠೋಡ ಮತ್ತಿತರ ಶಿಕ್ಷಕರು ವೇದಿಕೆಯಲ್ಲಿ ಇದ್ದರು. ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್. ಎಮ್. ಫಡ್ನೇಶಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಅನಸೂಯಾ ವಾಯ್. ಯಕ್ಕುಂಡಿ, ಶಿಕ್ಷಣ ಸಂಯೋಜಕರಾದ ವನಿತಾ ಆರ್, ಪ್ರವೀಣ ಹಾಗೂ ಸಿಆರ್ಪಿಗಳಾದ ರವಿ ಬಂಗೇಣ್ಣವರ, ವ್ಯವಸ್ಥಾಪಕ ಶಿಕ್ಷಕರಾದ ಶಿವಶಿಂಪಿ, ಶಿಲವಂತರ, ಪ್ರಕಾಶ, ರೂಪ, ಗೀತಾ, ಪುಷ್ಪ ಹಲವಾರು ಗಣ್ಯಮಾನ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಸುಹೇಚ ಪರಮವಾಡಿ

LEAVE A REPLY

Please enter your comment!
Please enter your name here