ಕೆಂಜಾರು : ಪೇಜಾವರ ಮಾಗಣೆ ಸಾರಬಳಿಯ ಶ್ರೀ ಧೂಮಾವತಿ ದೈವಸ್ಥಾನ ಕೆಂಜಾರಿನಲ್ಲಿ ಶ್ರೀ ಧೂಮಾವತಿ–ಧೂಮಾವತಿ ಬಂಟ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕದ ಹಿನ್ನೆಲೆಯಲ್ಲಿ ಸಮಿತಿ ರಚಿಸಿ ಕಾರ್ಯಪ್ರವೃತ್ತರಾಗುವ ಉದ್ದೇಶದಿಂದ ಮಾಗಣೆ ಸರ್ವರ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.
ಈ ಸಮಾಲೋಚನಾ ಸಭೆಯು ದಿನಾಂಕ 25-01-2026, ಆದಿತ್ಯವಾರ ಮಧ್ಯಾಹ್ನ 3.00 ಗಂಟೆಗೆ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಪುನರ್ ಪ್ರತಿಷ್ಠಾ ಹಾಗೂ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ಚರ್ಚಿಸಿ, ಅಗತ್ಯ ಸಲಹೆ–ಸೂಚನೆಗಳನ್ನು ನೀಡುವಂತೆ ಮಾಗಣೆ ಸರ್ವರನ್ನು ಸಭೆಗೆ ಆಹ್ವಾನಿಸಲಾಗಿದೆ.
ಸಭೆಯಲ್ಲಿ ಮಾಗಣೆ ಗುತ್ತು ಹಾಗೂ ಬರ್ಕೆ ಮನೆತನದವರು, ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಹತ್ತು ಸಮಸ್ತರು ಭಾಗವಹಿಸಲಿದ್ದಾರೆ. ನಿಗದಿತ ಸಮಯಕ್ಕೆ ಎಲ್ಲರೂ ಉಪಸ್ಥಿತರಿದ್ದು, ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ಆಯೋಜಕರು ವಿನಂತಿಸಿದ್ದಾರೆ.
