ಪೆರ್ಡೂರು : ಶ್ರೀಗಾಯತ್ರಿ ಮಹಿಳಾ ಭಜನಾ ಮಂಡಳಿ ಉದ್ಘಾಟನೆ

0
54

ಪೆರ್ಡೂರು ಶ್ರೀ ಗಾಯತ್ರಿ ಮಹಿಳಾ ಭಜನಾ ಮಂಡಳಿಯ ಉದ್ಘಾಟನೆ ಗುರುವಾರ ನಡೆಯಿತು. ಶ್ರೀ ಗಾಯತ್ರಿ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ದಿನೇಶ್ ಅಧ್ಯಕ್ಷತೆ‌ ವಹಿಸಿದ್ದರು.
ಪೆರ್ಡೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವೆಂಕಟರಮಣ ಆಚಾರ್ಯ ಪೆರ್ಡೂರು ಉದ್ಘಾಟನೆ ನೆರವೇರಿಸಿದರು. ದಾನಿಗಳು ಕೊಡಮಾಡಿದ ಸಮವಸ್ತ್ರವನ್ನು ಮಂಡಳಿಯ ಸದಸ್ಯರಿಗೆ ವಿತರಿಸಲಾಯಿತು. ಮಂಡಳಿಯ ಸದಸ್ಯರಿಂದ ಕುಣಿತ ಭಜನೆ ನೆರವೇರಿತು . ಪೆರ್ಡೂರು ಉಪೇಂದ್ರ ಆಚಾರ್ಯ, ಕಿರಣ್ ಆಚಾರ್ಯ, ಪಾಡಿಗಾರ ವ್ಯಾಸರಾಯ ಆಚಾರ್ಯ, ಸುರೇಶ್ ಆಚಾರ್ಯ, ದಯಾನಂದ ಆಚಾರ್ಯ, ಸವಿತ ದಿನೇಶ್ ಆಚಾರ್ಯ ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here