ದಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ (ICSI) ನಡೆಸುವ CSEET ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಲೋಕೇಶ್ (ಸತೀಶ್ ಹಾಗೂ ಸವಿತಾ ದಂಪತಿಗಳ ಪುತ್ರ), ಸಾನಿಕ ಕೆ. ಜಿ (ಗಿರೀಶ್ ಹಾಗೂ ರಜಿನಿ ಬಿ. ಬಿ ದಂಪತಿಗಳ ಪುತ್ರಿ), ಜೀವಿತ ಎಚ್ (ಹರೀಶ್ಚಂದ್ರ ಹೆಚ್ ಹಾಗೂ ವಿಜಯಲಕ್ಷ್ಮಿ ದಂಪತಿಗಳ ಪುತ್ರಿ), ನೀಪಾ ಎಸ್ (ಶಿವಕುಮಾರ್ ಹಾಗೂ ಮೇನಕ ದಂಪತಿಗಳ ಪುತ್ರಿ), ದಿಶಾ ಆರ್ ಕೆ (ರಾಧಾಕೃಷ್ಣ ಹಾಗೂ ಕುಸುಮಾವತಿ ದಂಪತಿಗಳ ಪುತ್ರಿ)ಇವರುಉತ್ತೀರ್ಣರಾಗಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಅಭಿನಂದಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿಕಾಲೇಜು ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.

