ಪೆರಿಯಡ್ಕ ಬೆಳಾಲು: ಉಚಿತ ನೋಟ್ ಪುಸ್ತಕ ವಿತರಣೆ

0
181


ದಿನಾಂಕ 13.6.2025 ರಂದು ಸ ಕಿ ಪ್ರಾ ಶಾಲೆ ಪೆರಿಯಡ್ಕ ಬೆಳಾಲು ಇಲ್ಲಿ ಪ್ರಭಾತ್ ಸಂಸ್ಥೆ ಉಜಿರೆ ಇವರು ನಿರಂತರ 14 ವರ್ಷಗಳಿಂದ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಒದಗಿಸುತ್ತಾ ಬಂದಿದ್ದು ಇದರ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪ ಇವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಭಾತ್ ಸಂಸ್ಥೆಯ ಮಾಲಕರಾದ ಶ್ರೀಮತಿ ಪ್ರಿಯಾಂಕ ಪ್ರವೀಣ್ ಭಟ್ ಹಾಗೂ ಅವರ ಹೆತ್ತವರು, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸತೀಶ್ ಎಳ್ಳುಗದ್ದೆ,ಹಳೆಪೇಟೆ ಉಜಿರೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪ್ರತಿಮಾ ಕೆ ಎಂ, ಇವರು ಭಾಗವಹಿಸಿದರು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯ ಇವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾನಿಗಳಿಗೆ ಶಾಲಾ ವಿದ್ಯಾರ್ಥಿಗಳಾದ ಕುಮಾರಿ ಚಾರ್ವಿ ಹಾಗೂ ಚರಿತ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಭಾತ್ ಸಂಸ್ಥೆಯ ಮಾಲಕರಾದ ಶ್ರೀಮತಿ ಪ್ರಿಯಾಂಕ ಪ್ರವೀಣ್ ಭಟ್ ಇವರನ್ನು ಶಾಲೆಯ ಪರವಾಗಿ ಗೌರವಿಸಲಾಯಿತು. ಸಹ ಶಿಕ್ಷಕಿ ಶ್ರೀಮತಿ ಜಯಶ್ರೀ ಬಿ ಕೆ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸಂತೋಷ ಮಡಿವಾಳ, ಎಸ್ ಡಿ ಎಂ ಸಿ ಸದಸ್ಯರಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here