ಬೆಳಾಲು ಗ್ರಾಮ ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ರಜತ ಮಹೋತ್ಸವ ಸಮಿತಿಯ ವತಿಯಿಂದ ಶಾಲೆಗೆ ವಿಶೇಷ ಕೊಡುಗೆಯನ್ನು ನೀಡಿ, ಶಾಲಾಭಿವೃದ್ಧಿಗೆ ಶ್ರಮಿಸಿದ ಶಾಲಾ ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೊಡುಗೈ ದಾನಿಗಳಾದ ಮೋಹನ್ ಕುಮಾರ್ ಮಾಲಕರು ಲಕ್ಷ್ಮಿ ಗ್ರೂಪ್ಸ್ ಉಜಿರೆ ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನ.
ಬೆಳಾಲು : ಫೆ 05 ಬೆಳಾಲು ಗ್ರಾಮ ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ರಜತ ಮಹೋತ್ಸವ ಸಮಿತಿಯ ಪರವಾಗಿ ಶಾಲೆಗೆ ವಿಶೇಷ ಕೊಡುಗೆಯನ್ನು ನೀಡಿ, ಶಾಲಾಭಿವೃದ್ಧಿಗೆ ಶ್ರಮಿಸಿದ ಶಾಲಾ ರಜತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೊಡುಗೈ ದಾನಿಗಳಾದ ಮೋಹನ್ ಕುಮಾರ್ ಮಾಲಕರು ಲಕ್ಷ್ಮಿ ಗ್ರೂಪ್ಸ್ ಉಜಿರೆ ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಜತಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಯಣ್ಣ ಮೀನಂದೇಲು, ಪ್ರಧಾನ ಸಂಚಾಲಕರಾದ ವಿದ್ಯಾ ಶ್ರೀನಿವಾಸ್ ಗೌಡ,ಕಾರ್ಯದರ್ಶಿ ಶಾಲಾ ಮುಖ್ಯೋಪಾಧ್ಯಾಯನಿ ವಿಜಯ, ಕಾರ್ಯದರ್ಶಿ ಸಂತೋಷ್ ಮಡಿವಾಳ ಉಪಾಧ್ಯಕ್ಷರಾದ ದಿನೇಶ್ ಧರ್ಮದೋಡಿ, ಪದಾಧಿಕಾರಿ ಹರೀಶ್ ಬಾಯ್ತರಡ್ಡ,ಶಾಲಾ ಶಿಕ್ಷಕಿ ಜಯಶ್ರೀ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಸಾದ್ ಮಿನಂದೇನು ಉಪಸ್ಥಿತರಿದ್ದರು.

