ಮಂಗಳೂರು: ಶಕ್ತಿಯ ಮೂಲ ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿದೆ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನಯ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.ಇನ್ನು ಇಂದು (ಜುಲೈ 4) ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಲೀಟರ್ ಪೆಟ್ರೋಲ್ ದರ 102.92 ಆಗಿದ್ದರೆ, ಡೀಸೆಲ್ ದರ 90.99 ರೂಪಾಯಿ ಆಗಿದೆ. ಇನ್ನುಳಿದಂತೆ ಚೆನ್ನೈನಲ್ಲಿ ಪೆಟ್ರೋಲ್ ದರ 100.80 ರೂಪಾಯಿ, ಮುಂಬೈ 103.50 ರೂಪಾಯಿ, ಡೀಸೆಲ್ ದರ ಕ್ರಮವಾಗಿ 92.39 ರೂಪಾಯಿ, 90.3 ರೂಪಾಯಿ ಆಗಿದೆ.
ದಕ್ಷಿಣ ಕನ್ನಡದಲ್ಲಿ 102.48 ರೂಪಾಯಿ ಇದ್ದ ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀ.ನಲ್ಲಿ 35 ಪೈಸೆ ಏರಿಕೆ ಕಂಡಿದೆ. ಉಡುಪಿ ಜಿಲ್ಲೆಯಲ್ಲಿ- 102.79 ರೂಪಾಯಿ ಇದ್ದ ಪೆಟ್ರೋಲ್ ಬೆಲೆಯಲ್ಲಿ 60 ಪೈಸೆ ಏರಿಕೆ ಕಂಡಿದೆ.