ಮೂಡುಬಿದಿರೆ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪೂಪಾಡಿಕಲ್ಲು ಕಡಂದಲೆ ಪಿ.ಎಫ್.ಸಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಪಿ.ಎಫ್.ಸಿ ಟ್ರೋಫಿ ಸೀಸನ್-4 30 ಗಜಗಳ ಕ್ರಿಕೆಟ್ ಪಂದ್ಯಾಟದಲ್ಲಿ ಪಿಎಫ್‌ಸಿ ತಂಡವು ಚಾಂಪಿಯನ್ ಆಗಿದೆ.

ಪಂದ್ಯಾಟದಲ್ಲಿ ಎಸ್‌ಪಿ ಇಲೆವನ್ ದುಬೈ ರನ್ರ‍್ಸ್ ಪ್ರಶಸ್ತಿಯನ್ನು ಪಡೆಯಿತು. ಡೆನಿಯಲ್ ಮಾರಿಗುಡಿ ಹಾಗೂ ರಾಜೇಶ್ ಮಾರಿಗುಡಿ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿ, ಡೆನಿಯಲ್ ಪೂಪಾಡಿಕಲ್ಲು ಪಂದ್ಯಶ್ರೇಷ್ಠ ಪ್ರಶಸ್ತಿ, ಪ್ರವೀಣ್ ದವನ್ ಬೆಸ್ಟ್ ಬೌಲರ್, ಸಿರಾಜ್ ಬೆಸ್ಟ್ ಬ್ಯಾಟ್ಸ್ಮ್ಯಾನ್, ಶಬೀರ್ ಗಂಟಾಲ್ಕಟ್ಟೆ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಪಡೆದರು.

ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಶಾಮಿಯಾನ ಸಂಯೋಜಕರ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷ ಓಜ್ವಾಲ್ ಪಿಂಟೊ, ಉದ್ಯಮಿ ನಾಗರಾಜ ಶೆಟ್ಟಿ, ಪತ್ರಕರ್ತ ಜಗದೀಶ್ ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ಪಿಎಫ್‌ಸಿ ಅಧ್ಯಕ್ಷ ತಿಮ್ಮಪ್ಪ ಹಾಗೂ ಸದಸ್ಯರು ಉಪಸ್ಥಿತರಿದ್ದರು.

