ಬೆಳುವಾಯಿ ಗ್ರಾಮ ಪಂಚಾಯತ್ ನಾಲ್ಕನೇ ಬಾರಿಯ ಸದಸ್ಯ ಬೆಳುವಾಯಿ ಕುಕ್ಕುಡೇಲು ನಿವಾಸಿ ಫಣಿರಾಜ್ ಬಲಿಪ ಅವರು ಸ್ವಲ್ಪ ಸಮಯದ ಅನಾರೋಗ್ಯದಿಂದಾಗಿ ಇಂದು ನಿಧನರಾದರು.
ಮೃತರು ಪತ್ನಿ ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಜನಸ್ನೇಹಿಯಾಗಿ ಸೇವೆ ಮಾಡುತ್ತಿದ್ದ ಅವರು ಟೆಲಿಫೋನ್ ಬೀಡಿ ಕಂಪೆನಿಯ ನೌಕರರಾಗಿದ್ದರು. ಮತ್ತು ಕಾಂಗ್ರೆಸ್ ಪಕ್ಷದ ಕಟ್ಟಾಳು ಎನಿಸಿದರು. ಮಾಜಿ ಸಚಿವ ಕೆ ಅಭಯಚಂದ್ರ, ಸೇರಿದಂತೆ ಪಂಚಾಯತ್ ಸದಸ್ಯರು ಹಾಗೂ ಊರವರು ಮೃತರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

