ಪಿದಾಯಿ ತುಳುಚಿತ್ರ ಬೆಳ್ಳಿತೆರೆಗೆ ಕ್ಷಣಗಣನೆ

0
150

ರಾಷ್ಟ್ರ ಪ್ರಶಸ್ತಿ ವಿಜೇತ ಸಂತೋಷ್ ಮಾಡ ನಿರ್ದೇಶನದಲ್ಲಿ, ಶರತ್ ಲೋಹಿತಾಶ್ವ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರದಲ್ಲಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿದ ಪಿದಾಯಿ ಎಂಬ ತುಳುಚಿತ್ರವನ್ನು ನಾವು ಶೀಘ್ರದಲ್ಲಿ ಬೆಳ್ಳಿತೆರೆಗೆ ಬಿಡುಗಡೆಗೊಳಿಸಲಿದ್ದೇವೆ. ಆ ಪ್ರಯುಕ್ತ ಈ ಶುಭಸಮಾಚಾರವನ್ನು ಮಾಧ್ಯಮದ ಮಿತ್ರರೊಂದಿಗೆ ಹಂಚಿಕೊಳ್ಳಲು ನಾವು ಒಂದು ಪ್ರೆಸ್‌ ಮೀಟನ್ನು ಇದೇ ಬರುವ ಶನಿವಾರ, ಎಪ್ರಿಲ್ 26ನೇ ತಾರೀಕು ಬೆಳಿಗ್ಗೆ 10.30ಕ್ಕೆ ಮಂಗಳೂರು ಪ್ರೆಸ್ ಕ್ಲಬ್‌ ಇಲ್ಲಿ ನಡೆಸಲಿದ್ದೇವೆ.

ಪ್ರೆಸ್‌ಮೀಟ್‌ನಲ್ಲಿ ಕನ್ನಡದ ಪ್ರಸಿದ್ಧ ನಟರಾದ, ಪಿದಾಯಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿರುವ ಶರತ್‌ ಲೋಹಿತಾಶ್ವ ಅವರು ಭಾಗವಹಿಸಲಿದ್ದಾರೆ. ಅವರ ಜೊತೆಗೆ ಈ ಚಿತ್ರದಲ್ಲಿ ನಟಿಸಿದ ತುಳು-ಕನ್ನಡ ಚಿತ್ರದ ಜನಪ್ರಿಯ ನಟರಾದ ದೀಪಕ್‌ ರೈ ಪಾಣಾಜೆ, ಪುಷ್ಪರಾಜ್‌ ಬೋಳಾರ, “ಶಿವದೂತ ಗುಳಿಗ” ತಂಡದ ಪ್ರತೀಶ್‌, ತುಳು ಚಿತ್ರ ಹಾಗೂ ನಾಟಕರಂಗದ ಜನಪ್ರಿಯ ಕಲಾವಿದೆ ರೂಪ ವರ್ಕಾಡಿ, ಚಿತ್ರ ನಿರ್ಮಾಪಕರಾದ ನಮ್ಮ ಕನಸು ಬ್ಯಾನರಿನ ಸುರೇಶ್‌ ಕೃಷ್ಣಮೂರ್ತಿ, ಸಂಭಾಷಣೆ ಬರೆದ ಡಿ.ಬಿ.ಸಿ ಶೇಖರ್‌,  ಮುಂತಾದವರು ಉಪಸ್ಥಿತರಿರುತ್ತಾರೆ.

LEAVE A REPLY

Please enter your comment!
Please enter your name here