ಪಿಲಿ ಅಜನೆ ಕಾರ್ಯಕ್ರಮ

0
12

ಮಂಗಳೂರು ದಸರಾ ಸಂಭ್ರಮಾಚರಣೆಯ ಪ್ರಯುಕ್ತ ತುಳುನಾಡಿನ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ ಪ್ರಮೋದ್ ಕರ್ಕೇರ ನೇತೃತ್ವದಲ್ಲಿ, ಶ್ರೀ ರವಿರಾಜ್ ಚೌಟ ಸಹಭಾಗಿತ್ವದಲ್ಲಿ ಪಿಲಿ ಅಜನೆ ಎಂಬ ಕಾರ್ಯಕ್ರಮವು ಮಂಗಳೂರು ನಗರದ ಕೋಡಿಯಾಲ್ ಬೈಲ್ ಎಂಜಿ ರೋಡ್ ದೀಪಾ ಕಂಫರ್ಟ್ಸ್ ಹತ್ತಿರ ಬಹಳ ವಿಜ್ರಂಭಣೆಯಿಂದ ಜರುಗಲಿದೆ. 4ನೇ ವರ್ಷದ ಪಿಲಿ ಅಜನೆ ಕಾರ್ಯಕ್ರಮವನ್ನು ಶಾಮಾ ರಾವ್ ಫೌಂಡೇಶನ್ ಮತ್ತು ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜ್ ನ ಕಾರ್ಯದರ್ಶಿ ಶ್ರೀಮತಿ ಎ. ಮಿತ್ರ ಎಸ್. ರಾವ್ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ. ಮೈನವಿರೇಳಿಸಲಿರುವ ಈ ವಿಶೇಷವಾದ ಪಿಲಿ ಅಜನೆ ಎಂಬ ಕಾರ್ಯಕ್ರಮಕ್ಕೂ ಮುನ್ನ ಕುಣಿತ ಭಜನೆ, ಗೊಂಬೆ ಬಳಗ, ಚೆಂಡೆ ವಾದನ, ಹುಲಿ ಕುಣಿತದೊಂದಿಗೆ ಭವ್ಯ ಶೋಭಾಯಾತ್ರೆಯು ಜರುಗಲಿದೆ. ಶ್ರೀ ಮೂಕಾಂಬಿಕಾ ಚೆಂಡೆ ಹಾಗೂ ಶ್ರೀಜಿತ್ ಸರಳಾಯ ಮತ್ತು ಶ್ರೇಷ್ಠ ಕದ್ರಿ ಇವರಿಂದ ವಿಭಿನ್ನ ಶೈಲಿಯ ಚೆಂಡೆ-ವಾಯಲಿನ್-ಫ್ಯೂಶನ್ ಹಾಗೂ ಭಕ್ತಿ-ಭಾವದ ಮಹಾಸಂಗಮವಾಗಿ ಶ್ರೀ ಧರ್ಮಶಾಸ್ತ ಸನ್ನಿಧಿ ಭಜನಾ ತಂಡ ಕುಳೂರು ಇವರಿಂದ ಕುಣಿತ ಭಜನೆಯು ನಡೆಯಲಿದೆ. ಕಾರ್ಯಕ್ರಮದ ಕೇಂದ್ರಬಿಂದುವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಭಾಗದಲ್ಲಿ ನಡೆದ ೨೦೨೩ರ ಸಾಲಿನ ಹುಲಿವೇಷ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿ ಅಗ್ರಮಾನ್ಯ ಪ್ರಶಸ್ತಿ ಪಡೆದ ಜನಮೆಚ್ಚಿದ ತಂಡ ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ರಿ.) ಜಗದಂಭ ಹುಲಿ ತಂಡದಿಂದ ಹುಲಿ ಕುಣಿತ ವಿಭಿನ್ನ ಕಾರ್ಯಕ್ರಮವು ಅತ್ಯಂತ ವೈಭವೋಪೇತವಾಗಿ ಜರುಗಲಿದೆ. ಈ ವರ್ಷದ ಪಿಲಿ ಅಜನೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಇತ್ತೀಚೆಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಲಂಡನ್ ವಿಶ್ವ ದಾಖಲೆ ಮಾಡಿರುವ ರೆಮೊನಾ ಇವೆಟ್ ಪೆರೆರಾ – ಸನ್ಮಾನ ಕಾರ್ಯಕ್ರಮ, ಸಿಡಿಮದ್ದು ಪ್ರದರ್ಶನವು ಜರುಗಲಿದೆ.

LEAVE A REPLY

Please enter your comment!
Please enter your name here