“ಪಿಲಿ ಪಂಜ” ತುಳು ಸಿನಿಮಾ ಡಿ. 12ಕ್ಕೆ ತೆರೆಗೆ

0
57

ಮಂಗಳೂರು: ಶಿಯಾನ ಪ್ರೊಡಕ್ಷನ್ ಬ್ಯಾನರ್ ನಡಿ ತಯಾರಾದ ಯುವ ನಿರ್ಮಾಪಕ ಪ್ರತೀಕ್ ಯು. ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ,ನಿರ್ದೇಶನದ ವಿಭಿನ್ನ ತಂತ್ರಜ್ನಾನದಿಂದ ಕೂಡಿದ “ಪಿಲಿ ಪಂಜ” ತುಳು ಸಿನಿಮಾ ನ. 7 ರ ಬದಲು ಡಿಸೆಂಬರ್ 12ಕ್ಕೆ ಬಿಡುಗಡೆಯಾಗಲಿದೆ.
ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ಸಿನಿಮಾ ನವೆಂಬರ್ 14ಕ್ಕೆ ಬಿಡುಗಡೆಯಾಗುವುದರಿಂದ ತುಳು ಸಿನಿಮಾದಲ್ಲಿ ಪೈಪೋಟಿ ಸಲ್ಲದು ಎಂದು ಮನಗಂಡು ಪಿಲಿ ಪಂಜ ಸಿನಿಮಾ ಬಿಡುಗಡೆಯ ದಿನಾಂಕವನ್ನು ಡಿಸೆಂಬರ್ 12ಕ್ಕೆ ಮುಂದೂಡಿತು, ರಾಕ್ ಸ್ಟಾರ್ ರೂಪೇಶ್ ಶೆಟ್ಟಿಯವರು ಬಿಡುಗಡೆ ದಿನಾಂಕವನ್ನು ಮಾಡುವುದರ ಮುಖೇನ ಇದೊಂದು ಉತ್ತಮ ಬೆಳವಣಿಗೆ, ಪಿಲಿ ಪಂಜ ತಂಡದ ಉತ್ತಮ ನಿರ್ಧಾರವನ್ನು ಸ್ವಾಗತಿಸುತಾ ನಮ್ಮ ಜೈ ಚಿತ್ರ ತಂಡ ಪಿಲಿ ಪಂಜ ಚಿತ್ರತಂಡಕ್ಕೆ ಬೆಂಬಲ ಕೊಡುತ್ತೇವೆ, ಎಲ್ಲಾ ಸಿನಿಮಾ ಪ್ರೇಕ್ಷಕರು ಪಿಲಿ ಪಂಜ ಚಿತ್ರ ತಂಡವನ್ನು ಬೆಂಬಲಿಸಿ ಸಿನಿಮಾವನ್ನು ಗೆಲ್ಲಿಸಬೇಕು ಎಂದು ಹೇಳುತ್ತಾ ಚಿತ್ರ ತಂಡಕ್ಕೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ನಿರ್ಮಾಪಕ ಪ್ರತೀಕ್ ಯು. ಪೂಜಾರಿ ಕಾವೂರು, ನಿರ್ದೇಶಕ ಭರತ್ ಶೆಟ್ಟಿ ಹಾಗೂ ಎಕ್ಸಿಕ್ಯುಟಿವ್ ಪ್ರೊಡ್ಯುಸರ್ ರಮೇಶ್ ರೈ ಕುಕ್ಕುವಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here