ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಗುರುವಾಯನಕೆರೆ, ಸತ್ಯ ಶ್ರೀ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಗೂ ಊರಿನ ಸದಸ್ಯರಿಂದ ಗಿಡ ನಾಟಿ ಕಾರ್ಯಕ್ರಮ ವನ್ನು ಪಂಚ ಲಿಂಗೇಶ್ವರ ದೇವಸ್ಥಾನ ಮೆನೇಜರ್ ಕೃಷ್ಣ ರವರು ಚಾಲನೆ ನೀಡಿದರು.
ಕಾರ್ಯಕ್ರಮ ದಲ್ಲಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರು ಕೃಷ್ಣಪ್ಪ ಕೆ ರವರು ಮಾತನಾಡಿ ಗಿಡ ಮಾನವನ ಜೀವನಕ್ಕೆ ಅವಶ್ಯವಾದ ಆಮ್ಲಜನಕ ಒದಗಿಸಿಕೊಡುತ್ತದೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ Csc ನೋಡಲ್ ಅಧಿಕಾರಿ ಸುರೇಶ ರವರು ಮಾತನಾಡಿ ಯೋಜನೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಜನರ ಮನ ಮುಟ್ಟುವ ರೀತಿಯಲ್ಲಿ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಶಿಲ್ಪ,ತಾಲೂಕಿನ ಜ್ಞಾನವಿಕಾಸ ಸಮನ್ವದಿಕಾರಿ ಪೂರ್ಣಿಮಾ, ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರಾದ ಸೀತಾರಾಮ್ ಹಾಗೂ ಸತ್ಯಶ್ರೀ ಕೇಂದ್ರದ ಸರ್ವ ಸದಸ್ಯರು ಸೇವಾಪ್ರತಿನಿಧಿ ಪ್ರೇಮ್ ಉಪಸಿತರಿದ್ದರು.