27 ಜುಲೈ 2025 ರಂದು ಗಂಟಾಲ್ಕಟ್ಟೆ ಚರ್ಚ್ ನ ನಿತ್ಯಾದಾರ್ ಸಭಾ ಭವನದಲ್ಲಿ ಪೊಯೆಟಿಕಾ ಕವಿಗೋಷ್ಠಿ 41 ಹಾಗೂ ಸಾಂಪ್ರಾದಾಯಿಕ ಆಹಾರದ ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು
ಆರಂಭದ ಕಾರ್ಯದಲ್ಲಿ ವೇದಿಕೆಯಲ್ಲಿ ಗಂಟಾಲ್ಕಟ್ಟೆ ಧರ್ಮಗುರುಗಳಾದ ವಂ|ಫಾ| ರೊನಾಲ್ಡ್ ಪ್ರಕಾಶ್ ಡಿಸೋಜ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಸುನಿಲ್ ಮಿರಾಂದಾ,
ಪೊಯಟಿಕಾ ಕವಿಗಳ ಮುಖ್ಯಸ್ಥರಾದ ನವೀನ್ ಪಿರೇರಾ ಸುರತ್ಕಲ್, ಸ್ತ್ರಿ ಸಂಘಟನೆ ಗಂಟಾಲ್ ಕಟ್ಟೆ ಘಟಕದ ಅಧ್ಯಕ್ಷರಾದ ಪ್ರಮೀಳ ಪಿರೇರಾ, ಕಥೋಲಿಕ್ ಸಭಾ ಮಾಡಬಿದ್ರಿ ವಲಯದ ಅಧ್ಯಕ್ಷರಾದ ಆಲ್ವಿನ್ ರೊಡ್ರಿಗಸ್, ಸ್ತ್ರಿ ಸಂಘಟನೆ ಮೂಡಬಿದ್ರಿ ವಲಯದ ಅಧ್ಯಕ್ಷರಾದ ಐಡಾ ಮಿನೇಜಸ್, ಗಂಟಾಲ್ ಕಟ್ಟೆ ಕಥೊಲಿಕ್ ಸಭಾ ಅಧ್ಯಕ್ಷರಾದ ರೋಶನ್ ಮಿರಾಂದಾ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಮತ್ತು ಸ್ತ್ರಿ ಸಂಘಟನೆ ಕಾರ್ಯದರ್ಶಿಯಾದ ಲೀಡಿಯ ಡಿಕುನ್ಹಾ, ಕಥೊಲಿಕ್ ಸಭಾ ಗಂಟಾಲ್ ಕಟ್ಟೆ ಘಟಕದ ಕಾರ್ಯದರ್ಶಿಯಾದ ಪ್ರೆಸಿಲ್ಲಾ ಪಿರೇರಾ, ಸ್ತ್ರಿ ಸಂಘಟನೆ ಸಿಲ್ವರ್ ಜುಬಿಲಿ ಸಮಿತಿಯ ಮತ್ತು ಕಾರ್ಯಾದ ಸಂಚಾಲಕಿಯರಾದ ಅನಿತಾ ಕೊರೆಯಾ ಹಾಜರಿದ್ದರು.
ಸ್ತ್ರಿ ಸಂಘಟನೆ ಗಂಟಾಲ್ ಕಟ್ಟೆ ಘಟಕದ ಅಧ್ಯಕ್ಷರಾದ ಪ್ರಮೀಳ ಪಿರೇರಾ ಎಲ್ಲರಿಗೂ ಸ್ವಾಗತ ಕೋರಿದರು. ವೇದಿಕೆಯಲ್ಲಿದ್ದ ಗಣ್ಯರು ಸಾಂಪ್ರದಾಯಿಕ ಆಹಾರವಾದ ಶೇವಿಗೆಯನ್ನು ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಗಂಟಾಲ್ ಕಟ್ಟೆ ಚರ್ಚ್ ನ ಧರ್ಮಗುರುಗಳಾದ ರೊನಾಲ್ಡ್ ಪ್ರಕಾಶ್ ಡಿಸೋಜ ರವರು ಮಾತನಾಡಿ ಪೊಯೆಟಿಕಾದ ಉಗಮ ಆನಿ ಪ್ರಸ್ತುತ ಸಾಧನೆಗಳ ಬಗ್ಗೆ ಮಾಹಿತಿ ನೀಡಿ ಪ್ರಶಂಸಿಸಿದರು. ಹಾಗೂ ಪೊಯೆಟಿಕಾ ಮುಖ್ಯಸ್ಥ ನವೀನ್ ಪಿರೇರಾರವರ ಜೊತೆಗಿನ ದೀರ್ಘ ಕಾಲದ ಮಿತ್ರತ್ವವನ್ನು ನೆನಪಿಸಿಕೊಂಡರು.
ನಂತರ ನಡೆದ ಕವಿಗೋಷ್ಠಿಯಲ್ಲಿ 28 ಕವಿಗಳು ತಮ್ಮ ಕವಿತೆಗಳನ್ನು ಸಾದರಪಡಿಸಿದರು. ಜೊತೆಗೆ ಗಂಟಾಲ್ ಕಟ್ಟೆಯ ಮಕ್ಕಳು, ವೈ.ಸಿ.ಎಸ್ ಆನಿ ಐ.ಸಿ.ವೈ.ಎಮ್ ಸದಸ್ಯರಿಂದ ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮ ಸಾದರಪಡಿಸಲಾಯಿತು.
ಕವಿಗೋಷ್ಠಿಯಲ್ಲಿ ಲಿಲ್ಲಿ ಕಾರ್ಡೋಜಾ ಗಂಟಾಲ್ಕಟ್ಟೆ , ಸುನಿತಾ ಶಾಂತಿ ತಾಕೊಡೆ , ಮರಿಯಾ ಪಿಂಟೊ ಕುಶೇಕರ್, ಸುನಿಲ್ ಗೊನ್ಸಾಲ್ವಿಸ್ , ಮಡಂತ್ಯಾರ್, ಪೀಟರ್ ಡಿಸೋಜ ತಾಕೊಡೆ, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ಲೊಲ್ಲ ಉಜಿರೆ , ವಿನ್ಸೆಂಟ್ ಬಿ ಡಿಮೆಲ್ಲೊ, ವಲೇರಿಯನ್ ಮೊರಾಸ್ ತಾಕೊಡೆ, ಅವಿಟಾ ಸಾಂತುಮಾಯೆರ್, ಶಿರ್ತಾಡಿ, ಎಡ್ವಿನ್ ಪಿಂಟೊ, ಗಂಟಲ್ಕಟ್ಟೆ, ನೀತಾ ಫೆರ್ನಾಂಡಿಸ್ ಬೆಳ್ವಾಯ್, ಆಂತೊನಿ ಡಿಸೋಜ ನಿನ್ನಿಕಲ್, ಫಾ| ರೊನಾಲ್ಡ್ ಡಿಸೋಜ, ಹೆನ್ರಿ ಮಸ್ಕರೇನಸ್, ಗಂಜಿಮಠ, ಮ್ಯಾಕ್ಸಿಮ್ ರೊಡ್ರಿಗಸ್ ಬೊಂದೆಲ್, ವಿನೋದ್ ಪಿಂಟೊ ತಾಕೊಡೆ, ಎಡಿ ಕಾಡ್ದೊಸ್ ತಾಕೊಡೆ, ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ, ಸ್ಟ್ಯಾನಿಸ್ವಾವ್ಸ್ ಸೊಜ್ ಕಿರೆಂ ,ಲೊಯ್ಡ್ ರೇಗೊ ತಾಕೊಡೆ, ರೋಶನ್ ಕ್ಯಾಸ್ತಲಿನೊ ಪಾಲಡ್ಕಾ, ಡಾ. ಫ್ಲಾವಿಯಾ ಕ್ಯಾಸ್ತಲಿನೊ ಮಣಿಪಾಲ, ಲವಿ ಗಂಜಿಮಠ ,ಜೊಸ್ಸಿ ಪಿಂಟೊ ಕಿನ್ನಿಗೋಳಿ ಮತ್ತು ಪೊಯೆಟಿಕಾ ಮುಖ್ಯಸ್ಥರಾದ ನವೀನ್ ಪಿರೇರಾ, ಸುರತ್ಕಲ್ ಸ್ವರಚಿತ ಕವನ ವಾಚಿಸಿದರು.
ಪ್ರಖ್ಯಾತ ಕಲಾಕಾರರಾದ ಆಲ್ವಿನ್ ದಾಂತಿ ಪೆರ್ನಾಲ್ ಮತ್ತು ಪ್ರೀತಾ ಮಿರಾಂದಾ ವಾಲೆನ್ಶಿಯಾ ಇವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಮಾರೋಪ ಕಾರ್ಯಾದಲ್ಲಿ ಎಲ್ಲಾ ಕವಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಪೊಯೆಟಿಕಾ ಅಧ್ಯಕ್ಷರಾದ ನವೀನ್ ಪಿರೇರಾ, ಸುರತ್ಕಲ್ ಮಾತನಾಡಿ ಕಳೆದ ಹಲವಾರು ವರುಷಗಳಿಂದ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಅತೀಹೆಚ್ಚು ಸಾಹಿತಿಕ ಕಾರ್ಯಕ್ರಮಗಳನ್ನು ಮಾಡಿದ ಗಂಟಾಲ್ಕಟ್ಟೆ ಧರ್ಮಗುರುಗಳಾದ ವಂ|ಫಾ| ರೊನಾಲ್ಡ್ ಪ್ರಕಾಶ್ ಡಿಸೋಜರವರನ್ನು ಅಭಿನಂದಿಸಿ ಗಂಟಾಲ್ಕಟ್ಟೆಯ ಧರ್ಮಪ್ರಜೆಗಳನ್ನು ಪ್ರಶಂಸಿಸಿದರು. ಮುಂದಕ್ಕೆ ಮಾತನಾಡಿದ ಅವರು ಸಾಂಪ್ರಾದಾಯಿಕ ಆಹಾರದ ಮಹತ್ವವನ್ನು ವಿವರಿಸಿದರು. ರೊವಿನ್ ಡಿಸೋಜ ಶಾಂತಿಪುರ ಪ್ರಾಯೋಜಿತ ಅತ್ಯುತ್ತಮ ಜನಪ್ರೀಯ ಕವಿತೆಯ ಬಹುಮಾನ ಕವಿ ಲೋಯ್ಡ್ ರೇಗೊ ತಾಕೊಡೆ ಇವರಿಗೆ ಪ್ರಾಪ್ತವಾಯಿತು.
ಮಂಗಳೂರಿನಲ್ಲಿ ನಡೆದ Super Mom session 7 ಸ್ಪರ್ಧೆಯಲ್ಲಿ ಗಂಟಾಲ್ಕಟ್ಟೆಯ ವಿಲ್ಮಾ ರೊಡ್ರಿಗಸ್ ಇವರಿಗೆ ಫಸ್ಟ್ ರನ್ನರ್ ಅಪ್ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತ್.
ಗಂಟಾಲ್ ಕಟ್ಟೆ ಕಥೊಲಿಕ್ ಸಭಾ ಅಧ್ಯಕ್ಷರಾದ ರೋಶನ್ ಮಿರಾಂದಾ ಧನ್ಯವಾದ ಸಮರ್ಪಿಸಿದರು.
ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ ಇವರು ಕಾರ್ಯನಿರ್ವಹಿಸಿದರು. ಕೊನೆಗೆ ಗಂಟಾಲ್ಕಟ್ಟೆ ಧರ್ಮಪ್ರಜೆಗಳು ಜೊತೆಸೇರಿ ತಯಾರಿಸಿದ ಬಹಳಷ್ಟು ಬಗೆಯ ಸಾಂಪ್ರಾದಾಯಿಕ ಆಹಾರವನ್ನು ಎಲ್ಲರಿಗೂ ಬಡಿಸಲಾಯಿತು. ಬಹುಸಂಖ್ಯೆಯಲ್ಲಿ ಹಾಜರಿದ್ದ ರಸಿಕರು ಕಾರ್ಯವನ್ನು ಆನಂದಿಸಿದರು.