ಕೃತಕತೆಯ ಅಮಲಿನಲ್ಲಿ ಕಾವ್ಯ ಸಾವಯವ ಘಮಲು ಕಳೆದುಕೊಳ್ಳದಿರಲಿ: ಸುಹೇಚ

ಸಾಹಿತ್ಯ ಚಿಗುರು ಬಳಗ, ಮಂಗಳೂರು ಇವರು 2025ನೇ ಸಾಲಿನ 70 ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಅಕ್ಟೋಬರ್ 14ರಂದು ಆಯೋಜಿಸಿದ್ದ ಕನ್ನಡ ಬರಿ ಭಾಷೆಯಲ್ಲ ರಾಜ್ಯ ಮಟ್ಟದ ಸ್ವರಚಿತ ಕವನ ರಚನೆ ಸ್ಪರ್ಧೆಯಲ್ಲಿ ಕವಯತ್ರಿ ಎಸ್. ಎಲ್. ವರಲಕ್ಷ್ಮೀ ಮಂಜುನಾಥ್, ಮೈಸೂರು ಇವರು ಬರೆದಿರುವ ‘ಕನ್ನಡಿಗರ ಆತ್ಮದ ಸೊಲ್ಲು’ ಕವಿತೆ ಚಿನ್ನದ ನಾಣ್ಯ ಸಹಿತ ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ. ಕವಿಗಳಾವ ಹಾಸನದ ಕುಮಾರ ಚಲುವಾದಿಯವರ ‘ನಮ್ಮಯ ತಾಯಿನುಡಿ’ ಹಾಗೂ ಮಂಗಳೂರಿನ ಡಾ. ಸುರೇಶ ನೆಗಳಗುಳಿರವರ ‘ಬಿಡೆನಾ ನುಡಿಯ’ ಕವಿತೆಗಳು ದ್ವೀತಿಯ ಸ್ಥಾನ ಪಡೆದು ಬೆಳ್ಳಿಯ ಪದಕಗಳಿಗೆ ಭಾಜನವಾದವು. ವಿಜಯನಗರದ ಎಂ. ಪಿ. ಎಂ. ಕೊಟ್ರಯ್ಯ ಅವರ ಕನ್ನಡ ಬರಿ ಭಾಷೆಯಲ್ಲ… ಜೀವನಾಡಿ’ ಮತ್ತು ದಕ್ಷಿಣ ಕನ್ನಡದ ಯೋಗೀಶ್ ಪೇರಂದಡ್ಕರವರ ‘ಸಿರಿನುಡಿ ಸೌಭಾಗ್ಯ ಕನ್ನಡ’ ಕವಿತೆಗಳು ತೃತೀಯ ಸ್ಥಾನಪಡೆದು ಬೆಳ್ಳಿ ನಾಣ್ಯಗಳಿಗೆ ಪಾತ್ರವಾಗಿವೆ ಎಂದು ಸ್ಪಾರ್ಧಾ ನಿರ್ಣಾಯಕರಾದ ಸುಹೇಚ ಕಾವ್ಯನಾಮದ ಕವಿ ಸುಭಾಷ್ ಚವ್ಹಾಣ ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಾಜ್ಯಮಟ್ಟದ ಸ್ವರಚಿತ ಕವನ ಸ್ಪರ್ಧೆಗೆ ಕರುನಾಡಿನ ಹಲಾವಾರು ಜಿಲ್ಲೆಗಳಿಂದ ೧೩೦ ಕ್ಕೂ ಹೆಚ್ಚು ಕವಿತೆಗಳು ಬಂದಿದ್ದವು ಕೆಲವು ಕವಿತೆಗಳು ಕೊಟ್ಟ ವಿಷಯಕ್ಕೆ ಜೀವಕಳೆ ಮೂಡಿಸುವ ಕವಿತೆಗಳು ಬಂದಿದ್ದವು. ೧೫ ದಿನಗಳವರೆಗೆ ಐದಾರು ಸುತ್ತಿನಲ್ಲಿ ಸಾಣೆ ಹಿಡಿಯುವ ಕೆಲಸ ನಡೆದು ಎ ಐ ತಂತ್ರಜ್ಞಾನ ಸಹಾಯದಿಂದ ಬರೆದ ಕೃತಕ ಕಾವ್ಯಗಳು ನೈಜ ಪ್ರತಿಭಾಶಾಲಿ ಕವಿಗಳಿಗೆ ಅನ್ಯಾವಾಗುತ್ತಿದ್ದನ್ನು ತಪ್ಪಿಸುವಲ್ಲಿ ನಿರ್ಣಾಯಕರಾದ ಸುಹೇಚರವರು ಮತ್ತು ಎಂ. ಡಿ. ಮಂಚಿಯವರು ಹಗಲಿರುಳು ಶ್ರಮಿಸು ಮೌಲ್ಯಮಾಪನದಿಂದ ಉತ್ತಮ ಕವಿತೆಗಳನ್ನು ಆರಿಸಿ ಫಲಿತಾಂಶ ನೀಡಿದ್ದು; ಆಯೋಜಕರಾದಿಯಾಗಿ ಸ್ಪರ್ಧಾಳುಗಳು ಮತ್ತು ಕಾವ್ಯಾಸಕ್ತರಿಗೆ ಸಂತಸ ತಂದಿದೆ ಎಂದು ನುಡಿದರು.
ಎಐ ಸೃಜನೆಯ ಕವಿತೆಗಳನ್ನು ಗುರುತಿಸಿ ಸ್ಪರ್ಧೆಯಿಂದ ಹೊರಹಾಕುವುದು ಬಹಳ ಪ್ರಯಾಸದ ಕಾರ್ಯವೆ ಆಗಿತ್ತು. ತಪಸ್ಸಿನಂತೆ ಕವನಗಳನ್ನು ಹತ್ತಾರು ವರ್ಷಗಳಿಂದ ರಚಿಸುವ ಕವಗಳಿಗೆ ಅನ್ಯಾವಾಗದಂತೆ ಫಲಿತಾಂಶ ನೀಡಿದ ತೃಪಿಭಾವಿದೆ. ಕೃತಕತೆಯ ಅಮಲಿನಲ್ಲಿ ಕಾವ್ಯವು ಸಾವಯವದ ಘಮಲತೆಯನ್ನು ಕಳೆದು ಕೊಳ್ಳದಿರಲಿ ಎಂಬ ಆಶಯವನ್ನು ಕವಿ ಸುಹೇಚರವರು ತಮ್ಮ ತೀರ್ಪು ನುಡಿಯಲ್ಲಿ ಆಶಯ ವ್ಯಕ್ತಪಡಿಸಿದರು. ಅಡ್ಡದಾರಿ ಹಿಡಿದು ಕವನ ಬರೆದು ನಾಡು ನುಡಿಗೆ ಕುತ್ತು ತರುವರರನ್ನು ತಕ್ಷಣವೆ ಚಿವುಟಿ ಹಾಕಬೇಕು.
ಮಂಜುಳಾ ಬಿ. ಕೆ. ತುಮಕೂರು, ಸುಮಲತಾ ಡಿ. ನಾಯ್ಕ, ಉತ್ತರ ಕನ್ನಡ, ಮಧುಮಾಲತಿ ರುದ್ರೇಶ್, ಬೇಲೂರು, ಯು. ಸಿರಾಜ್ ಅಹಮದ್ ಸೊರಬ, ಬೆಂಗಳೂರು ರಮೇಶ್ ಮೆಲ್ಕಾರ್, ಲಕ್ಷ್ಮೀ, ದಕ್ಷಿಣ ಕನ್ನಡ, ಪೌಝಿಯಾ ಹರ್ಷದ್ ಇವರ ಕವಿತೆಗಳು ತೀರ್ಪುಗಾರ ಮೆಚ್ಚುಗೆಗೆ ಪಾತ್ರವಾಗಿವೆ. ವಿಜೇತರಿಗೆ ಬಂಗಾರದ ನಾಣ್ಯ, ಬೆಳ್ಳಿ ಪದಕ, ಬೆಳ್ಳಿ ನಾಣ್ಯ ವ ಪ್ರಶಸ್ತಿ ಪತ್ರ ಮತ್ತು ಮೆಚ್ಚುಗೆ ಸ್ಥಾನ ಪಡೆದವರಿಗೆ ಪುಸ್ತಕ ಬಹುಮಾನ ಸಹಿತ ಪ್ರಶಸ್ತಿ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗುವುದೆಂದು ಸಾಹಿತ್ಯ ಚಿಗುರು ಸಂಸ್ಥಾಪಕರಾದ ನಿಯಾಜ್ ಪಡೀಲ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು.

