ಅಂಚೆ ಕಾರ್ಡ್ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ

0
197

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ ದ್ವಾರಕಾ ಪ್ರತಿಷ್ಠಾನ(ರಿ) ಪುತ್ತೂರು ಪ್ರಾಯೋಜಕತ್ವದಲ್ಲಿ ಸಾಹಿತ್ಯದ ಚಿತ್ತ ವಿದ್ಯಾರ್ಥಿಗಳತ್ತ ಘೋಷವಾಕ್ಯದೊಂದಿಗೆ,
ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯೊಂದಿಗೆ, “ಕನ್ನಡ ರಾಜ್ಯೋತ್ಸವ -೨೦೨೫ ಮತ್ತು ಪುತ್ತೂರು ತಾಲೂಕು ಮಟ್ಟದ ವಿದ್ಯಾರ್ಥಿಗಳಿಗೆ ನಡೆದ ಅಂಚೆ ಕಾರ್ಡ್ ಕವನ ಸ್ಪರ್ಧೆಯ ಕವನಗಳನ್ನು ಗೌರವಾನ್ವಿತ . ಮಧುಕುಮಾರ್, ಕನ್ನಡ ಉಪನ್ಯಾಸಕರು,ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ)ಕಾಲೇಜು, ನೆಹರು ನಗರ ಪುತ್ತೂರು. ಇವರು ಹಾಗೂ ಇವರ ಪರಿಣತ ತಂಡದ ಸಮಕ್ಷಮದಲ್ಲಿ ಎಲ್ಲ ಕವನಗಳನ್ನು ವಿಮರ್ಶಿಸಲಾಗಿದ್ದು, ಸ್ಪರ್ಧೆಯ ಫಲಿತಾಂಶ ಇಂತಿದೆ

ಪ್ರಾಥಮಿಕ ವಿಭಾಗ :
ಪ್ರಥಮ:ಆದ್ಯ.ಡಿ

ದ್ವಿತೀಯ:ಆದಿತ್ಯ.ಎಂ

ಪ್ರೌಢ ಶಾಲಾ ವಿಭಾಗ:
ಪ್ರಥಮ:ಆಖ್ಯಾತ್ ರೈ
ದ್ವಿತೀಯ:ಮಣಿ ಮುಂಡಾಜೆ
ತೃತೀಯ:ಮುಫ್ ಲಿಯಾ ಕೆ. ಎ
ಪ್ರೋತ್ಸಾಹಕ ಬಹುಮಾನ :
ಕೆ. ಆದಿತ್ಯ ಭಂಡಾರ್ಕರ್
ವಿಸ್ಮಿತ. ಎಂ
ಸಿಂಚನ. ವಿ. ಗೌಡ
ಆದ್ಯ.ಆರ್
ಅಭಿನವ್ ರಾಜ್

====================
ಕಾಲೇಜು ವಿಭಾಗ
ಪ್ರಥಮ:ದೀಪ್ತಿ. ಕೆ. ಸಿ
ದ್ವಿತೀಯ:ಆದ್ಯಂತ್.ಎ
ತೃತೀಯ:ಅನನ್ಯ.ಹೆಚ್

ಪ್ರೋತ್ಸಾಹಕ ಬಹುಮಾನ
ಅಶ್ವಿನಿ. ಎಂ
ಮುಝಮಿಲ್ ಕರಾಯ
ಲಾವಣ್ಯ.ಎಸ್
ಕೆ. ಇ. ಮಿಕ್ದಾದ್

===================

ಸ್ನಾತಕೋತ್ತರ ವಿಭಾಗ
ಪ್ರಥಮ:ಭಾವನಾ.ಕೆ.ಜೆ
ದ್ವಿತೀಯ:ದೀಕ್ಷಾ.ಕೆ.ಸಿ

===================

ಕವನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಮುಕ್ರಂಪಾಡಿಯ ನಂದಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ 01-11-2025ರ ಶನಿವಾರ ಮಧ್ಯಾಹ್ನ 2.30 ಕ್ಕೆ ನಡೆಯಲಿದೆ.
ಸಮಾರಂಭವನ್ನು ದ್ವಾರಕಾ ಪ್ರತಿಷ್ಠಾನ (ರಿ)ಪುತ್ತೂರು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಭಟ್ ಉದ್ಘಾಟಿಸಲಿದ್ದು,ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ರವರು
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ದರ್ಬೆ ಇಲ್ಲಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ವಿಜಯ ಕುಮಾರ್ ಮೊಳೆಯಾರ್ ಆಶಯ ಭಾಷಣ ಮಾಡಲಿದ್ದಾರೆ. ಹಿರಿಯ ಸಾಹಿತಿ,ಅಂಕಣಕಾರರಾಗಿರುವ ಶ್ರೀ ನಾರಾಯಣ ರೈ ಕುಕ್ಕುವಳ್ಳಿ, ಪಿ ಎಂ ಶ್ರೀ ಸ. ಹಿ. ಪ್ರಾ. ಶಾಲೆ ನರಿಮೊಗರು ಇಲ್ಲಿನ ಮುಖ್ಯಗುರುಗಳಾದ ಶ್ರೀ. ತಾರಾನಾಥ್ ಸವಣೂರು, ಐ. ಎ. ಎಸ್.ಐ. ಪಿ. ಎಸ್ ದರ್ಶನ ಸಂಸ್ಥೆ ತರಬೇತುದಾರರು ಮತ್ತು ಮುಖ್ಯಸ್ಥರಾದ ಶ್ರೀ ದರ್ಶನ್ ಗರ್ತಿಕೆರೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು,ಯುವ ಸಾಹಿತಿ ನಾರಾಯಣ ಕುಂಬ್ರರವರ ಮೊಳಗಲಿ ಕನ್ನಡದ ಕಹಳೆ ಆಲ್ಬಮ್ ಹಾಡು ಬಿಡುಗಡೆಗೊಳ್ಳಲಿದೆಯೆಂದು
ಕಾರ್ಯಕ್ರಮ ಸಂಯೋಜಕರಾದ ಶ್ರೀ ನಾರಾಯಣ ಕುಂಬ್ರ ಮತ್ತು ಶ್ರೀ ಗಣರಾಜ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here