ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಆಯ್ಕೆ

0
15

ಕಾಂತಾವರ ಗ್ರಾಮದ ಬೇಲಾಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಅವರನ್ನು ಆಯ್ಕೆ ಮಾಡಲಾಯಿತು.

ಬೇಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘದ ಸಭೆಯಲ್ಲಿ ಪ್ರದೀಪ್ ಬೇಲಾಡಿ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದೊಂದಿಗೆ ಆಯ್ಕೆ ಮಾಡಲಾಯಿತು, ಹಾಗೂ ಉಪಾಧ್ಯಕ್ಷರಾಗಿ ಅರುಣ್ ಕೋಟ್ಯಾನ್ ಕೇಪ್ಲಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಪೂಜಾರಿ ಗುಡ್ಡೆಯಂಗಡಿ, ಕ್ರೀಡಾ ಕಾರ್ಯದರ್ಶಿಯಾಗಿ ಧೀರಜ್ ಶೆಟ್ಟಿ ಪಡ್ಡಲ್ಲಬೆಟ್ಟು, ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಪ್ರತಿನಿಧಿಯಾಗಿ ಪ್ರಶಸ್ತ್ ಶೆಟ್ಟಿ ಮುದಲೆಮನೆ ಬೇಲಾಡಿ ಅವರನ್ನು ಆಯ್ಕೆ ಮಾಡಲಾಯಿತು. ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್.ಎಸ್.ಆರ್ ಅವರು ಸಂಘದ ಕೋಶಾಧಿಕಾರಿಯಾಗಿರುತ್ತಾರೆ. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ನಂತರ ನವರಾತ್ರಿ ಸಂದರ್ಭದಲ್ಲಿ ಶಾಲೆಯಲ್ಲಿ ನಡೆಯಲಿರುವ ಶಾರದಾ ಪೂಜಾ ಮಹೋತ್ಸವದ ಕಾರ್ಯಕ್ರಮಗಳ ರೂಪುರೇಷೆಗಳು ಹಾಗೂ ಶಾಲಾ ಅಭಿವೃದ್ಧಿಯ ಕುರಿತಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್.ಎಸ್.ಆರ್, ಹಳೆ ವಿದ್ಯಾರ್ಥಿ ಸಂಘದ ನಿರ್ಗಮಿತ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಗಳಾದ ರಂಜಿತ್ ಶೆಟ್ಟಿ ಪುಂಚಾಡಿ ಮತ್ತು ಪ್ರಭಾಕರ ಕುಲಾಲ್, ಶಾರದಾ ಪೂಜಾ ಮಹೋತ್ಸವದ ಅರ್ಚಕರಾದ ಸುಧೀರ್ ಭಟ್ ನ್ಯಾಯತೋಟ, ಹಿರಿಯ ಹಳೆ ವಿದ್ಯಾರ್ಥಿಗಳಾದ ಸುರೇಶ್ ಭಟ್ ನ್ಯಾಯತೋಟ, ಶ್ರೀಮತಿ ವಿದ್ಯಾ.ವಿ. ಶೆಟ್ಟಿ ಹಾಗೂ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here