ಕಾಸರಗೋಡು : ಅಡೂರಿನ ಪ್ರಮಿತಾ ಎ ಅವರು ಭೌತ ಶಾಸ್ತ್ರ ವಿಭಾಗದಲ್ಲಿ ಮಂಡಿಸಿದ, “ಇನ್ವೆಸ್ಟಿಗೇಷನ್ ಆನ್ ಸ್ಪ್ರೇ ಪೈರೋಲೈಸ್ಡ್ MN3O4 ಬೇಸ್ಡ್ ಥಿನ್ ಪಿಲ್ಮ್ಸ್ ಫಾರ್ ಸುಪರ್ ಕೆಪಾಸಿಟರ್ ಅಪ್ಲಿಕೇಶನ್’ ಮಹಾ ಪ್ರಬಂಧಕ್ಕೆ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ನೀಡಿದೆ. ಇವರು ಡಾ. ರವಿಪ್ರಕಾಶ್ ವೈ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಇವರು ಅಡೂರು ಗ್ರಾಮದ ದೇರಳ ಶ್ರೀಪ್ರಸಾದ ಭಾರಿತ್ತಾಯ – ಪದ್ಮಾ ಎಚ್ ದಂಪತಿಯ ಪುತ್ರಿ. ಪ್ರಸ್ತುತ ಬೆಂಗಳೂರಿನ ಐಐಎಸ್ ಸಿಯ ಸೆಂಟರ್ ಫಾರ್ ನ್ಯಾನೋ ಸೈನ್ಸ್ ಮತ್ತು ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.