ದೀಕ್ಷಿತಾ ಪೂಜಾರಿ ಮುಖ್ಯ ಪಾತ್ರದಲ್ಲಿ ಪ್ರಣೀತ್ ರಾಜ್ ಫಿಲ್ಮ್ಸ್ ತನ್ನ ಎರಡನೇ ಪ್ರಸ್ತುತಿಗೆ ಚಾಲನೆ ನೀಡಿದ್ದು, ಈ ಬಾರಿ ಕನ್ನಡ ಚಿತ್ರರಂಗಕ್ಕೆ ಒದಗಿಸುತ್ತಿದೆ ಒಂದು ವಿಶಿಷ್ಟ ಡಾಕ್ಯುಮೆಂಟರಿ ಚಿತ್ರ.
ಮುಖ್ಯ ಪಾತ್ರದಲ್ಲಿ ದೀಕ್ಷಿತಾ ಪೂಜಾರಿ ನಟಿಸುತ್ತಿದ್ದು, ಅವರ ನೈಜ ಅಭಿನಯ ಈ ಚಿತ್ರಕ್ಕೆ ಜೀವಂತತೆ ತರುತ್ತದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಸ್ಪರ್ಶಿಸುವ ಈ ಪ್ರಯತ್ನ, ಪ್ರೇಕ್ಷಕರನ್ನು ಒಳಮಟ್ಟದ ಚಿಂತನೆಗೆ ತಳ್ಳಲಿದೆ. ಕನ್ನಡ ಚಿತ್ರರಂಗದಲ್ಲಿ ನೈಜ ಘಟನೆಗಳ ಆಧಾರಿತ, ಮನನೋಪಯೋಗಿಯಾದ ಚಿತ್ರಗಳ ಕೊರತೆಯ ನಡುವೆ, ಈ ಹೊಸ ಪ್ರಯತ್ನ ಹೊಸ ಆಯಾಮ ಒದಗಿಸಲಿದೆ. ಚಿತ್ರದ ಕಥೆ, ನಿರ್ದೇಶನ ಹಾಗೂ ಸಹ-ನಿರ್ಮಾಪಕರಾಗಿ ಸುನೀಲ್ ಗೌಡ ಕಾರ್ಯನಿರ್ವಹಿಸಿದ್ದಾರೆ.

