ಹುಬ್ಬಳ್ಳಿಯ ಬಂಟರ ಭವನದಲ್ಲಿ ಶೀರೂರು ಪರ್ಯಾಯದ ಪೂರ್ವಭಾವೀ ಸಮಾಲೋಚನಾ ಸಭೆ

0
80

ಹುಬ್ಬಳ್ಳಿಯ ಬಂಟರ ಭವನದಲ್ಲಿ ಶೀರೂರು ಪರ್ಯಾಯದ ಪೂರ್ವಭಾವೀ ಸಮಾಲೋಚನಾ ಸಭೆ ನಡೆಯಿತು. ಬೆಳಗಾವಿ ಬಂಟರ ಭವನದ ಅಧ್ಯಕ್ಷ ಶ್ರೀ ವಿಜಯಾನಂದ ಶೆಟ್ಟಿ ಮಾತನಾಡಿ ಶೀರೂರು ಪರ್ಯಾಯ ನಮ್ಮ ಪರ್ಯಾಯ ಎಂಬ ಧ್ಯೇಯದಿಂದ ಬೆಳಗಾವಿಯ ಎಲ್ಲ ಭಕ್ತರನ್ನೂ ಒಗ್ಗೂಡಿಸಿ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಬಂಟರ ಸಂಘದ ಮಹೇಶ್ ಶೆಟ್ಟಿ, ಸುಗ್ಗಿ ಸುಧಾಕರ್ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ, ಹರಿ ಓಂ ಸುಧಾಕರ್ ಶೆಟ್ಟಿ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು. ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಉಡುಪಿಯ ದ್ವೈ ವಾರ್ಷಿಕ ಮಹಾಪರ್ವ ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪರ್ಯಾಯ ಸಮಿತಿ ರಾಜ್ಯಾದ್ಯಂತ ವಿವಿಧ ಭಾಗಗಳಿಗೆ ಭೇಟಿ ನೀಡಿ ಸಹಕಾರ ಕೋರುತ್ತಿದೆ. ಶೀರೂರು ಪರ್ಯಾಯವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಟ್ಟಾರ್ ರತ್ನಾಕರ್ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ವಿಷ್ಣು ಮೂರ್ತಿ ಆಚಾರ್ಯ,ಪ್ರಚಾರ ಸಮಿತಿಯ ನಂದನ್ ಜೈನ್,ಮಧುಕರ್ ಮುದ್ರಾಡಿ, ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here