ಉಡುಪಿ ಕಂಬಳಕ್ಕೆ ಪೂರ್ವಭಾವಿ ಸಭೆ : ಶಂಕುಸ್ಥಾಪನೆಗೆ ಸಜ್ಜಾದ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ

0
10

ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿ ವತಿಯಿಂದ ಉಡುಪಿ ಕಂಬಳ ನಡೆಯಲ್ಲಿದ್ದು ಇದರ ಪೂರ್ವಭಾವಿ ಸಭೆ ಇಂದು ಶಾಂಭವಿ ಹೋಟೆಲ್ ನಲ್ಲಿ ನಡೆಯಿತು. ಉಡುಪಿ ಕಂಬಳದ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ ಸಮಾರಂಭ ಇದೇ ತಿಂಗಳ 28 ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ ಕಂಬಳ ಕೋಣದ ಯಜಮಾನರಾದ ನಂದಳಿಕೆ ಶ್ರೀಕಾಂತ್ ಭಟ್, ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, 80 ಬಡಗುಬೆಟ್ಟು ಬ್ರಹ್ಮಬೈದರ್ಕಳ ಗರೋಡಿ ಮೊಕ್ತೇಸರರಾದ ಅರುಣಾಚಲ ಹೆಗ್ಡೆ, ಶ್ರೀ ವೈಶ್ಣವಿ ದುರ್ಗಾ ದೇವಸ್ಥಾನ ಮೊಕ್ತೇಸರರಾದ ಜಯರಾಜ್ ಹೆಗ್ಡೆ, ಉದ್ಯಮಿಗಳಾದ ಶಿವಪ್ರಸಾದ್ ಹೆಗ್ಡೆ, ರಾಜ್ಯ ಕಂಬಳ ಸಮಿತಿಯ ಸದಸ್ಯರಾದ ವಿಜಯ್ ಕುಮಾರ್ ಕಂಗಿನಮನೆ ಹಾಗೂ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿಯ ಪದಾಧಿಕಾರಿಗಳು ಮತ್ತು ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here