ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ 27 ನೇ ಭಜನಾ ಕಮ್ಮಟದ ನಿಮಿತ್ತ ವಿಟ್ಲ ಭಜನಾ ಪರಿಷತ್ತಿನ ಪೂರ್ವಭಾವಿ ಸಭೆ

0
25

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಧರ್ಮಸ್ಥಳದಲ್ಲಿ ನಡೆಯುವ 27ನೇ ಭಜನಾ ಕಮ್ಮಟ ನಿಮಿತ್ತ ವಿಟ್ಲ ತಾಲೂಕು ಭಜನಾ ಪರಿಷತ್ತಿನ ಪೂರ್ವಭಾವಿ ಸಭೆಯು ವಿಟ್ಲ ಯೋಜನಾ ಕಚೇರಿಯಲ್ಲಿ ಬುಧವಾರ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜನಜಾಗೃತಿ ವೇದಿಕೆಯ ಸದಸ್ಯ ಕೃಷ್ಣಯ್ಯ ಬಲ್ಲಾಳ್ ಸರ್ವರ ಸಹಕಾರದಿಂದ ಭಜನಾ ಕಮ್ಮಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ದೇವಿದಾಸ್ ಶೆಟ್ಟಿ ವಹಿಸಿದ್ದರು. ಭಜನ ಪರಿಷತ್ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಸಾಲಿಯಾನ್ ಭಜನ ಕಮಟ್ಟದ ಬಗ್ಗೆ ಸವಿವಿವರವಾದ ಮಾಹಿತಿ ನೀಡಿದರು.ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಕುಮಾರ್ ಅಳಿಯೂರು ತಾಲೂಕಿನ ಭಜನಾ ಮಂಡಳಿಯವರು ನಿರ್ವಹಿಸಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ, ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಎಸ್, ತಾಲೂಕು ಭಜನಾ ಪರಿಷತ್ ಕೋಶಾಧಿಕಾರಿ ಜಯರಾಮ್ ರೈ ಉಪಸ್ಥಿತರಿದ್ದರು.

ಪೂರ್ವಭಾವಿ ಸಭೆಯಲ್ಲಿ ತಾಲೂಕು ಭಜನಾ ಪರಿಷತ್ತಿನ ಸದಸ್ಯರುಗಳು, ವಿವಿಧ ಭಜನಾ ಮಂಡಳಿ ಸದಸ್ಯರುಗಳು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.

ಯೋಜನಾ ಕಚೇರಿಯ ಆಡಳಿತ ಪ್ರಬಂಧಕರಾದ ವಾಣಿ ಸ್ವಾಗತಿಸಿ, ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿ ರಮೇಶ್ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here