ಜೈನ ಕಾಶಿ ಕಾರ್ಕಳದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಸಜ್ಜು

0
10

ಕಾರ್ಕಳ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾ ಮಸ್ತಾಭಿಷೇಕ ಸಮಿತಿ ದಾನಶಾಲೆ ಕಾರ್ಕಳ ಇದರ ಕಾರ್ಯಧ್ಯಕ್ಷ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್ ಕರೆದ ಪತ್ರಿಕಾಗೋಷ್ಠಿ ಉದ್ದೇಶ ಮಾತನಾಡಿದ ಅವರು ಕರಾವಳಿ ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕಾರ್ಕಳದ ಗೋಮಟೇಶ್ವರ ಬೆಟ್ಟದಲ್ಲಿ ಪ್ರತಿಷ್ಠ ಪ್ರತಿಷ್ಠಾಪಿಸಲ್ಪಟ್ಟ ಏಕಶಿಲಾ ಶ್ರೀ ಗೋಮಟೇಶ್ವರ ವಿಗ್ರಹವು ಸರ್ವಧರ್ಮೀಯರ ಸೌಹಾರ್ದಯುತ ಬದುಕಿನ ಸುಂದರ ನೆಲೆಬೀಡು , ಜೈನ ಕಾಶಿಯಂದೆ ಪ್ರಖ್ಯಾತವಾಗಿರುವ 18 ಪ್ರಾಚೀನ ಜಿನ ಮಂದಿರ ಗಳಿಂದ ಕಂಗೊಳಿಸುತ್ತಿರುವ ಈ ಪ್ರವಾಸಿ ಕೇಂದ್ರವು ಸರ್ವ ಜನಾಂಗದ ಆಕರ್ಷಣೀಯ ಧಾರ್ಮಿಕ ಕೇಂದ್ರವಾಗಿದೆ.

ಕಾರ್ಕಳದ ಬೆಟ್ಟದಲ್ಲಿ ಪ್ರತಿ ಸ್ಥಾಪಲ್ ಪಟ್ಟ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ವಿಗ್ರಹವು ಧರ್ಮ ಸಮನ್ವ ಯತೆಯ ಸಂದೇಶವನ್ನು ಸಾರುತ್ತಿದೆ ಈ ಬೃಹತ್ ವಿಗ್ರಹವು ಶ್ರವಣಬೆಳಗೊಳದ ಎರಡನೆಯ ಉನ್ನತವಾದ ಏಕಶಿಲಾ ವಿಗ್ರಹವಾಗಿದೆ 42 ಅಡಿ ಎತ್ತರದ ಉತ್ತುಂಗ ವಿಗ್ರಹವು ಕ್ರಿಸ್ತಶಕ 1432 ರಲ್ಲಿ ಕಾರ್ಕಳದ ಭೈರವಸ ಮನೆತನದ ಪ್ರಸಿದ್ಧ ಅರಸನಾದ ಪಾಂಡ್ಯರಾಜನು ಪರಮಪೂಜ್ಯ ಲಲಿತ ಕೀರ್ತಿ ಯತಿ ಶ್ರೇಷ್ಠರ ಪ್ರೇರಣೆಯಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಿರುತ್ತಾನೆ.

ಆಗ ಮುಕ್ತ ಸಂಪ್ರದಾಯದಂತೆ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮೀಗೆ ಇತ್ತೀಚಿನ ವರ್ಷಗಳಲ್ಲಿ 1954,1990,2002 ಮತ್ತು 2015 ರಲ್ಲಿ ಮಹಾಮಸ್ತಾಭಿಷೇಕ ಮಹೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವೈಭವದಿಂದ ಸಂಪನ್ನಗೊಂಡಿದೆ. ಈ ಕಾಲಘಟ್ಟದಲ್ಲಿ ಜೈನ್ ಜೈನ ಗಾಮ ಪದ್ಧತಿಯಂತೆ ಪರಂ ಪರಾನುಕತವಾಗಿ 12 ವರ್ಷಗಳೊಮ್ಮೆ ನಡೆಯುವ ಮಹಾಮಸ್ತಾಭಿಷೇಕವು ಈ ಬಾರಿ 2027 ರ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಿದರು.

ಈ ಮಹೋತ್ಸವದ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಪ್ರವಾಸಿಗರು ಕಾರ್ಕಳಕ್ಕೆ ಭೇಟಿ ಕೊಡಲಿದ್ದಾರೆ . ಈ ಸಂದರ್ಭದಲ್ಲಿ ಆಗಮಿಸಲಿರುವ ಯಾತ್ರಿಕರಿಗೆ ಕಾರ್ಕಳ ಕ್ಷೇತ್ರದಲ್ಲಿ ಮೂಲಭೂತ ಸವಲತ್ತುಗಳನ್ನು ಒದಗಿಸುವ ದೊಂದಿಗೆ ಸರಕಾರದ ವಿವಿಧ ಇಲಾಖೆಗಳು ವ್ಯವಸ್ಥೆ ಮಾಡಬೇಕಾದ ಸೌಲಭ್ಯಗಳು ಕಾಮಗಾರಿಕೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಡೆಯಬೇಕಾದ ಕಾರ್ಯಕ್ರಮಗಳ ಯೋಜನೆಗಳನ್ನು ಸಿದ್ಧಪಡಿಸಿ ಒಟ್ಟು ರೂಪಾಯಿ 82,37,52000- ವೆಚ್ಚದ ಅಂದಾಜು ಪಟ್ಟಿಯ ಪ್ರಸ್ತಾವನೆಯನ್ನು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. 2015ರ ಮಹಾಮಸ್ತಾಭಿಷೇಕ ಮಹೋತ್ಸವಕ್ಕೆ ಹೆಚ್ಚಿನ ಅನುದಾನವನ್ನು ಆಗಿನ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಅವರು ನೀಡಿದ್ದು ಈ ಬಾರಿಯೂ ಅವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾದ ಅಂದಾಜು ಪಟ್ಟಿಯ ಉಲ್ಲೇಖಿತ ಕ್ರಿಯಾ ಯೋಜನೆಗೆ ಸಂಪೂರ್ಣವಾಗಿ ಸ್ಪಂದಿಸುವ ಭರವಸೆ ಇದೆ ಎಂದು ಹೇಳಿದರು.

ಕಾರ್ಕಳದ ದಾನಶಾಲೆ ಶ್ರೀ ಜೈನ ಮಠದಪರಮಪೂಜ್ಯ ರಾಜಗುರು ಧ್ಯಾನ ಯೋಗಿ ಸ್ವಸ್ಥ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ಮಹಾಮಸ್ತಾಭಿಷೇಕ ಸಮಿತಿಯ ಅಧ್ಯಕ್ಷರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ರಾಜಶ್ರೀ ಡಾಕ್ಟರ್ ಡಿ. ವೀರೇಂದ್ರ ಹೆಗಡೆಯವರು ಏಪ್ರಿಲ್ 19 2018 26 ಆದಿತ್ಯವಾರ ಭಗವಾನ್ ಶ್ರೀ ಮಹಾಮಸ್ತಾಭಿಷೇಕ ಕಾರ್ಯಾಲಯ ಉದ್ಘಾಟ ನೆರವೇರಿಸಿ 2027ರ ಮಹಾಮಸ್ತಭಿಷೇಕದ ದಿನಾಂಕವನ್ನು ಘೋಷಣೆ ಮಾಡಲಿರುವರು.

ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಾ ಮಸ್ತಾಭಿಷೇಕ ಸಮಿತಿಯ ಕಾರ್ಯಾಲಯ ಉದ್ಘಾಟನೆ ನೆರವೇರಿಸಲಿರುವರು ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಮಾನ್ಯ ಯೋಜನಾ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಕೀಕ ಇಲಾಖೆ ಸಚಿವರು ಹಾಗೂ ಮಹಾಮಸ್ತಾಭಿಷೇಕ ಸಮಿತಿಯ ಗೌರವ ಸಂರಕ್ಷಕರಾದ ಡಿ ಬಿ ಸುಧಾಕರ್ ಅವರು ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಮಾರಾಟ ಮಹಾಮಂಡಳಿ ನಿಯಮಿತ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಮಹಾಮಸ್ತಾಭಿಷೇಕ ಸಮಿತಿಯ ಕಾರ್ಯಧ್ಯಕ್ಷರಾದ ಡಾಕ್ಟರ್ ಎಂ. ಯೆನ್ ರಾಜೇಂದ್ರ ಕುಮಾರ್ ಅವರು ವಹಿಸಲಿರುವರು . ಈ ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಹಾಗೂ ಅದಾನಿ ಗ್ರೂಪ್ ಕರ್ನಾಟಕ ಇದರ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷರಾದ ಕಿಶೋರ್ ಆಳ್ವ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ ಕೆ ಮಾಜಿ ಸಚಿವರಾದ ಮಹಾಮಸ್ತಭಿಷೇಕ ಸಮಿತಿಯ ಉಪಾಧ್ಯಕ್ಷರಾದ ಕೆ ಅಭಯ ಚಂದ್ರ ಜೈನ್, ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟ್ ಇದರ ಮ್ಯಾನೇಜಿಂಗ್ ಟ್ರಸ್ಟಿ ಉದಯಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ಥ ಶ್ರೀ ಪಟ್ಟಾಚಾರ್ಯ ಮಹಾಸ್ವಾಮಿಜಿಯವರು, ಪುಷ್ಪರಾಜ ಜೈನ್ ಮಂಗಳೂರು, ಮೋಹನ್ ಮಡಿವಾಳ, ಸಿಎ ಪ್ರಭಾತ್ ಕುಮಾರ್, ಅನಂತ ರಾಜ ಪು ವಣಿ ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಈ ಜಯ ಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗಡೆ,
ಭರತ್ ಕುಮಾರ್ ಜೈನ್, ಶೀತಲ್ ಜೈನ್, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here