ಶ್ರೀ ಕ್ಷೇತ್ರ ಹಟ್ಟಿ ಅಂಗಡಿ ವಿನಾಯಕ ದೇವಸ್ಥಾನದಲ್ಲಿ ಕುಂದಾಪುರ ತಾಲೂಕು ಮಟ್ಟದ ಭಜನೋತ್ಸವದ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು, ಸಭೆ ಅಧ್ಯಕ್ಷತೆಯನ್ನು ರಾಜೇಂದ್ರ ಕುಮಾರ್ ಬಸ್ರೂರು ತಾಲೂಕು ಅಧ್ಯಕ್ಷರು ರಾಜ್ಯ ಉಪಾಧ್ಯಕ್ಷರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇವರು ವಹಿಸಿದ್ದರು.
ಮಾರ್ಚ್ 1 ರಂದು ತಾಲೂಕು ಮಟ್ಟದ ಭಜನೋತ್ಸವ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಸಿದ್ದಿ ವಿನಾಯಕ ದೇವಸ್ಥಾನ ಹಟ್ಟಿ ಅಂಗಡಿ ಯಲ್ಲಿ ಹಮ್ಮಿಕೊಳ್ಳುವ ಬಗ್ಗೆ ದಿನಾಂಕವನ್ನು ನಿಗದಿಪಡಿಸಲಾಯಿತು.
ಕಾರ್ಯಕ್ರಮದ ರೂಪುರೇಷೆ ಬಗ್ಗೆ ತಾಲೂಕು ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಬಸ್ರೂರು ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ವಲಯ ಸಂಯೋಜಕರಾದಂತಹ ಜಯಲಕ್ಷ್ಮಿ, ಗ್ರಾಮ ಅಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದಂತಹ ಪ್ರಭಾಕರ್ ಶೆಟ್ಟಿ, ನಿವೃತ್ತ ತಾಲೂಕು ವಿಸ್ತರಣಾಧಿಕಾರಿಗಳಾದಂತಹ ನರಸಿಂಹ ಪೂಜಾರಿ, ಜಿಲ್ಲಾ ಸಮನ್ವಯಾಧಿಕಾರಿಗಳಾದ ರವೀಂದ್ರ ಎಸ್ ಬಸ್ರೂರು, ತಾಲೂಕಿನ ಎಲ್ಲಾ ವಲಯಗಳ ಸಂಯೋಜಕರು ಮೇಲ್ವಿಚಾರಕರಾದಂತಹ ಸುಬ್ರಮಣ್ಯ ಪ್ರಸಾದ್, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.


