ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಸೇವಾಂಜಲಿ ಎಜುಕೇಶನ್ ಟ್ರಸ್ಟ್ ಇವರ ಅಂಗ ಸಂಸ್ಥೆಯಾದ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಡಲಕೆರೆಯಲ್ಲಿ ಡಿಸೆಂಬರ್ 7ರಂದು ಭಜನಾ ಪ್ರೇರಣೋತ್ಸವ ಜರಗಿತು. ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದೀಪ ಪ್ರಜ್ವಲನೆಗೈದರು.
ಈ ಸಂದರ್ಭದಲ್ಲಿ ಅರಮನೆಯ ಕುಲದೀಪ್ ಎಂ, ಟ್ರಸ್ಟ್ ನ ಅಧ್ಯಕ್ಷ ರಾಜೇಶ್ ಬಂಗೇರ, ಶಾಲಾ ಸಂಚಾಲಕ ಶಾಂತರಾಮ ಕುಡ್ವ, ಕಾರ್ಯದರ್ಶಿ ಕೇಶವ ಹೆಗ್ಡೆ, ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್, ಕೋಶಾಧಿಕಾರಿ ಎಸ್ಎನ್ ಬೋರ್ಕರ್, ಹಾಗೂ ಇತರರು ಹಾಜರಿದ್ದರು.
ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ಈ ಸಂದರ್ಭದಲ್ಲಿ ದುಬೈ ಮೊಗವೀರ ಸಂಘದ ಅಧ್ಯಕ್ಷ ಸಿಎ ಲೋಕೇಶ್ ಪುತ್ರನ್, ಎಂ ಸಿ ಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಮಿಜಾರು ಸುರೇಶ್ ಶೆಟ್ಟಿ, ಉದ್ಯಮಿ ಗಜೇಂದ್ರ ಕುಮಾರ್, ಶಾಲಾ ಹಿರಿಯ ವಿದ್ಯಾರ್ಥಿ ಸಿಎ ರಘುಪತಿ ಭಟ್, ವಾಮದಪದವು ಹರಿಕಾರಂತ್, ನೀರ್ಕೆರೆ ಯೋಗಿತಾ ನವಾನಂದ, ಧರ್ಮಸ್ಥಳ ಸ್ವಾತಿ ವಿಶ್ವಜಿತ್, ಶಾಲಾ ಮುಖ್ಯ ಮಾತಾಜಿ ವತ್ಸಲ ರಾಜೇಶ್, ಬೆಳುವಾಯಿ ಅಂಬೂರಿಯ ದಿನಕರ ಕುಲಾಲ್ ಹಾಗೂ ಇತರರು ಹಾಜರಿದ್ದರು.
ಶಾಲಾ ಮೈದಾನದಲ್ಲಿ ಹಲವಾರು ತಂಡಗಳು ಸ್ವಯಂ ಪ್ರೇರಣೆಯಿಂದ ಭಜನಾ ಉತ್ಸವದಲ್ಲಿ ಭಾಗವಹಿಸಿದ್ದರು.


