ಐದು ದೇಶಗಳ ಪ್ರವಾಸ ಮುಗಿಸಿ ಇಂದು ಬೆಳಿಗ್ಗೆ ಭಾರತಕ್ಕೆ ಮರಳಿದ ಪ್ರಧಾನಿ ಮೋದಿ

0
25

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಐದು ದೇಶಗಳ ಪ್ರವಾಸ ಕೈಗೊಂಡಿದ್ದರು. ಪ್ರಧಾನಿ ಮೋದಿ ಮೊದಲು ಘಾನಾಗೆ  ಭೇಟಿ ನೀಡಿದ್ದರು. ನಂತರ ಅವರು ಕೆರಿಬಿಯನ್ ದೇಶವಾದ ಟ್ರಿನಿಡಾಡ್ ಮತ್ತು ಟೊಬೆಗೊಗೆ ಭೇಟಿ ನೀಡಿದ್ದರು.ಪ್ರವಾಸದ ಮೂರನೇ ಹಂತದಲ್ಲಿ, ಪ್ರಧಾನಿ ಮೋದಿ ಅರ್ಜೆಂಟೀನಾಗೆ ಹೋಗಿದ್ದರು. ಇದರ ನಂತರ  ಬ್ರೆಜಿಲ್ ತಲುಪಿದ್ದರು.

ಇಲ್ಲಿ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು ಮತ್ತು ಬ್ರೆಸಿಲಿಯಾ ರಾಜ್ಯ ಭೇಟಿ ನೀಡಿದ್ದರು.  ಇದರ ನಂತರ, ಕೊನೆಯ ಹಂತದಲ್ಲಿ, ಪ್ರಧಾನಿ ಮೋದಿ ನಮೀಬಿಯಾಕ್ಕೆ ಹೋಗಿದ್ದರು. ಐದು ದೇಶಗಳ ಭೇಟಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಹಿಂತಿರುಗಿದ್ದಾರೆ.

ವಿಮಾನ ಗುರುವಾರ ಬೆಳಗ್ಗೆ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಎಂಟು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಘಾನಾ, ಟ್ರಿನಿಡಾಡ್ ಮತ್ತು ಟೊಬೆಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ಸೇರಿದಂತೆ ಐದು ದೇಶಗಳಿಗೆ ಭೇಟಿ ನೀಡಿದ್ದರು.

ಘಾನಾದ ಅತ್ಯುನ್ನತ ನಾಗರಿಕ ಗೌರವ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ನೀಡಿ ಗೌರವಿಸಲಾಗಿತ್ತು. ಟೊಬೆಗೊ ಅಧ್ಯಕ್ಷೆ ಕ್ರಿಸ್ಟೀನ್ ಕಂಗಲೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ದಿ ಆರ್ಡರ್ ಆಫ್ ದಿ ರಿಪಬ್ಲಿಕ್ ಆಫ್ ಟ್ರಿನಿಡಾಡ್ ಮತ್ತು ಟೊಬೆಗೊ ಅನ್ನು ಪ್ರದಾನ ಮಾಡಿದರು.  ಬಳಿಕ ನಮೀಬಿಯಾಕ್ಕೆ ಭೇಟಿ ನೀಡಿದ್ದರು ಅಲ್ಲಿ ಕೂಡ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಚಿಯಾ ಮಿರಾಬಿಲಿಸ್ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here