ಐತಿಹಾಸಿಕ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್ ಟಿಎ) ಅಂಕಿತ ಹಾಕುವ ಮೂಲಕ ದೇಶದ ಮೀನುಗಾರಿಕಾ ಹಾಗೂ ಕೃಷಿ ಉತ್ಪನ್ನಗಳ ರಫ್ತಿನ ಮೇಲಿನ ಬ್ರಿಟನ್ ವಿಧಿಸುತ್ತಿದ್ದ ಸುಂಕವನ್ನು ರದ್ದು ಮಾಡುವಲ್ಲಿ ವಿಶೇಷ ಮುತುವರ್ಜಿವಹಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಈ ಒಪ್ಪಂದವು ನರೇಂದ್ರ ಮೋದಿ ಯವರ ಜನ ಕೇಂದ್ರಿತ ವ್ಯಾಪಾರ ರಾಜತಾಂತ್ರಿಕತೆಗೆ ಸಾಕ್ಷಿಯಾಗಿದೆ. 95% ಕೃಷಿ ರಫ್ತುಗಳ ಮೇಲಿನ ಸುಂಕವನ್ನು ಮನ್ನಾ ಮಾಡುವ ಮೂಲಕ ನಮ್ಮ ರೈತರಿಗೆ ಮತ್ತು 99% ಸಾಗರ ರಫ್ತುಗಳ ಮೇಲೆ ಶೂನ್ಯ ಸುಂಕದೊಂದಿಗೆ ನಮ್ಮ ಮೀನುಗಾರರಿಗೆ ಪ್ರಯೋಜನವನ್ನು ನೀಡಲಿದೆ.
ಮೀನುಗಾರಿಕಾ ಕ್ಷೇತ್ರಕ್ಕೆ ವಿಶೇಷ ಶಕ್ತಿ ತುಂಬುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದ ಫಲವಾಗಿ ಈ ಒಪ್ಪಂದದ ಮೂಲಕ ಭಾರತದ ಸಾಗರೋತ್ಪನ್ನಗಳಿಗೆ ಬ್ರಿಟನ್ನಿನಲ್ಲಿ ಸುಂಕ ಇರುವುದಿಲ್ಲ.
ಇದರಿಂದಾಗಿ ಭಾರತದ ರಫ್ತುದಾರರಿಗೆ ಹೆಚ್ಚಿನ ಬೆಲೆ ಸಿಗಲಿದೆ. ಭಾರತದಿಂದ ರಫ್ತಾಗುವ ಸೀಗಡಿಗೆ ಬ್ರಿಟನ್ನಿನಲ್ಲಿ ಈಗ ಶೇ 4.2ರಿಂದ ಶೇ 8.5ರವರೆಗೆ ತೆರಿಗೆ ಇದೆ. ಒಪ್ಪಂದ ಜಾರಿಗೆ ಬಂದ ಈ ಎಲ್ಲಾ ತೆರಿಗೆ ಶೂನ್ಯವಾಗಲಿದ್ದು ಮೀನುಗಾರಿಕಾ ಉತ್ಪನ್ನಗಳ ರಫ್ತು ಹೆಚ್ಚಳವಾಗಿ ಮೀನುಗಾರಿಕೆ ಅಭಿವೃದ್ಧಿಗೆ ವೇಗ ನೀಡಲಿದೆ.
ದೇಶದ ವ್ಯಾಪಾರ ಕ್ಷೇತ್ರದಲ್ಲಿಯೇ ಮಹತ್ವದ ಒಪ್ಪಂದಕ್ಕೆ ಅಂಕಿತ ಹಾಕುವ ಮೂಲಕ ದೇಶದ ರೈತರು ಹಾಗೂ ಮೀನುಗಾರಾರಿಗೆ ಆರ್ಥಿಕ ಶಕ್ತಿ ತುಂಬಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರಕ್ಕೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ಯಶ್ ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.