ಉಡುಪಿ: ಇತ್ತೀಚಿಗೆ ಉಡುಪಿಯ ಅಂಬಾಗಿಲಿನ ಅಮೃತಾ ಗಾರ್ಡನ್ ನಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪೃಥ್ವಿಕ್ ಆರ್ .ನಾಯ್ಕ ಇವರು ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರು ಕೊಕ್ಕರ್ಣೆಯ ದುರ್ಗಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ 2 ನೇಯ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.ಬ್ರಹ್ಮಾವರದ ಕುಂಜಾಲು ಹೆರಿಂಜೆ ಕ್ರಾಸ್ ಇಲ್ಲಿಯ ರವೀಂದ್ರ ನಾಯ್ಕ ಹಾಗೂ ಭವಾನಿ. ಆರ್. ನಾಯ್ಕ್ ಇವರ ಪುತ್ರ ನಾಗಿದ್ದು ಪ್ರಸ್ತುತ ಇವರು ಕರಾಟೆ ಶಿಕ್ಷಣ ವನ್ನು ಚಾಂತಾರು ಮಹಿಷಮರ್ದಿನಿ ಡೋಜದಲ್ಲಿ ಶಿಕ್ಷಕರಾದ ಅಮೃತಾ ಹಾಗೂ ರಾಜ್ಯ ಕರಾಟೆಕ್ರೀಡಾಕೂಟದ ಶಿಕ್ಷಕರಾದ ವಾಮನ್ ಪಾಲನ್ ಇವರಿಂದ ಪಡಿಯುತ್ತಿದ್ದಾರೆ. ಈಗಾಗಲೇ ಇವರು ರಾಜ್ಯ , ರಾಷ್ಟ್ರ ಹಾಗೂ ಅಂತಾಾಷ್ಟ್ರೀಯ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಹಲವಾರು ಬಾರಿ ಜಯಗಳಿಸಿದ್ದಾರೆ.