ನೆಟ್ಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಮೋಷನ್ ಡೇ ಕಾರ್ಯಕ್ರಮ

0
7

ಕಲ್ಲಡ್ಕ : ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ 7 ನೇ ತರಗತಿವರೆಗಿನ ಮಕ್ಕಳ ಮುಂದಿನ ತರಗತಿಗೆ ಸೇರಿಸುವ ವಿಶೇಷ ಕಾರ್ಯಕ್ರಮ ಪ್ರಮೋಷನ್ ಡೇ ಕಾರ್ಯಕ್ರಮ ಜರಗಿತು.

ದಕ್ಷಿಣ ಕನ್ನಡ ಜಿಲ್ಲಾ ಹಸಿರು ದಳದ ಮ್ಯಾನೇಜರ್ ನಾಗರಾಜ್ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ ಪೋಷಕರ ಸಹಕಾರ ಇದ್ದಾರೆ ಮಾತ್ರ ಸರಕಾರಿ ಶಾಲೆ ಉಳಿಯಲು ಸಾಧ್ಯ, ಜನರಿಗೆ ಸ್ವಚ್ಛತೆ ಬಗ್ಗೆ ನಾಗರಿಕ ಪ್ರಜ್ಞೆ ಹಾಗೂ ಜಾಗ್ರತಿ ಅವಶ್ಯಕತೆ ಇದೆ ಎಂದರು.

ಏಮಾಜೆ ಶಾಲಾ ಮುಖ್ಯ ಶಿಕ್ಷಕಿ ಡಾ. ತ್ರಿವೇಣಿ ರಮೇಶ್ ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮಕ್ಕಳ ಹೋಲಿಕೆ ಬಗ್ಗೆ ಪೋಷಕರಿಗೆ ಮಾನವರಿಕೆ ಮಾಡಿ, ಗ್ರಾಮೀಣ ಪ್ರದೇಶದ ಏಮಾಜೆ ಶಾಲೆ ಇಂದು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಆಗಲು ಪೋಷಕರ ಹಾಗು ಸಮುದಾಯದ ಸಹಕಾರದ ಬಗ್ಗೆ ಮಾಹಿತಿ ನೀಡಿ, ಸರಕಾರ ಈ ವರ್ಷದಿಂದ ಜಾರಿಗೆ ತಂದ ದ್ವಿ ಬಾಷಾ ಶಿಕ್ಷಣದ ಮೂಲಕ ನೆಟ್ಲ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವಸಲ್ಲಿ ಪೋಷಕರು ಸಹಕಾರ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಏಳನೇ ತರಗತಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಯಿತು. 6ನೇ ತರಗತಿ ಮಕ್ಕಳು 7ನೇ ತರಗತಿ ಮಕ್ಕಳನ್ನು ಸ್ಮರಣೆಕೆ ಹಾಗು ವಿವಿಧ ಉಡುಗರೆಗಳನ್ನು ನೀಡಿ ಗೌರವಿಸಿದರು. ಶಾಲೆಯಿಂದ ಬೀಳ್ಕೊಡುತ್ತಿರುವ ಮಕ್ಕಳು ತಮ್ಮ ನೆನಪಿಗಾಗಿ ಒಂದು ಪ್ಯಾನಲ್ ಬೋರ್ಡ್ ಶಾಲೆಗೆ ಹಸ್ತಾoತರಿಸಿದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಕುಲಾಲ್, ಉಪಾಧ್ಯಕ್ಷೆ ಭವ್ಯ, ಶಾಲಾ ಮುಖ್ಯ ಶಿಕ್ಷಕಿ ಶೋಭಾಲತಾ, ಹಸಿರು ದಳದ ಮೇಲ್ವಿಚಾರಕ ಸಾಂತಪ್ಪ, ಉಪಸ್ಥಿತರಿದ್ದರು.

ಎಲ್ಲಾ ಮಕ್ಕಳಿಗೆ ಪೋಷಕ ಜೊತೆ ಮುಂದಿನ ತರಗತಿಗೆ ಪ್ರಮೋಷನ್ ಅದ ಬಗ್ಗೆ ಪತ್ರ ನೀಡಲಾಯಿತು. ಪೋಷಕರು ಶಾಲೆಯಲ್ಲಿ ಸಿಗುವ ಶಿಕ್ಷಣದ ಗುಣಮಟ್ಟದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ನೆಟ್ಲಶಾಲೆ ಬಗ್ಗೆ ದತ್ತು ಸ್ವೀಕಾರ ಮಾಡಲಾಯಿತು. ಹಿರಿಯ ಶಿಕ್ಷಕ ಪ್ರವೀಣ್ ಸ್ವಾಗತಿಸಿ, ಶಾಲ ಶಿಕ್ಷಕರು ತರಗತಿವಾರು ಮಕ್ಕಳ ಪ್ರಮೋಷನ್ ಪತ್ರ ವಾಚಿಸಿದರು. ಚಿತ್ರಕಲಾ ಶಿಕ್ಷಕ ಜಯರಾಮ್ ನಾವಡ ಕಾರ್ಯ ಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here