ಆಸ್ತಿ ವಿಚಾರ: ತಂದೆ ಹಾಗೂ ಸಹೋದರನನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ ಪುತ್ರ!

0
87

ಹಾಸನ: ಆಸ್ತಿ ವಿಚಾರಕ್ಕೆ ಮಗನೇ ತಂದೆ ಹಾಗೂ ಸಹೋದರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.


ಹಾಸನ:
 ಆಸ್ತಿ ವಿಚಾರಕ್ಕೆ ಮಗನೇ ತಂದೆ ಹಾಗೂ ಸಹೋದರನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.

ತಂದೆ ದೇವೇಗೌಡ (70) ಹಾಗೂ ಸಹೋದರ ಮಂಜುನಾಥ್ (50) ಕೊಲೆಯಾದವರು. ಮೋಹನ್ (47) ಕೊಲೆಗೈದ ಆರೋಪಿ. ಮಂಜುನಾಥ್ ಹಾಗೂ ಮೋಹನ್ ಇಬ್ಬರು ಅವಿವಾಹಿತರಾಗಿದ್ದರು. ಮಂಜುನಾಥ್, ತಂದೆ-ತಾಯಿಯೊಂದಿಗೆ ವಾಸವಿದ್ದರು. ಆದರೆ ಮೋಹನ್ ಒಂದೇ ಮನೆಯಲ್ಲಿದ್ದರೂ ಪ್ರತ್ಯೇಕವಾಗಿ ವಾಸವಿದ್ದ. ಮೋಹನ್ ಗಲಾಟೆ ಮಾಡಿದ್ದ. ಇದೇ ವಿಚಾರವಾಗಿ ಕೋಪಗೊಂಡಿದ್ದ ಮೋಹನ್, ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕುಡಿದ ಮತ್ತಿನಲ್ಲಿ ಮನೆಯ ಗೋಡೆ ನೆಗೆದು, ಮಲಗಿದ್ದ ಅಣ್ಣನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ. 

ಈ ವೇಳೆ ತಂದೆ ದೇವೇಗೌಡ ಅವರು ಹಿರಿಯ ಮಗ ಮಂಜುನಾಥ್ ಮೇಲೆ ಹಲ್ಲೆಯಾಗುತ್ತಿರುವುದನ್ನು ತಡೆಯಲು ಬಂದಿದ್ದರು. ಈ ವೇಳೆ ಮೋಹನ್, ತಂದೆಯ ಮೇಲೆಯೂ ಮಚ್ಚಿನಿಂದ ಹಲ್ಲೆ ಮಾಡಿದ್ದ. ಮಗನನ್ನ ತಡೆಯಲು ಬಂದ ತಾಯಿ ಜಯಮ್ಮನ ಮೇಲೂ ಮೋಹನ್ ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ಜಯಮ್ಮ, ಮನೆಯಿಂದ ಹೊರಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡು, ರಾತ್ರಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು. 

ತಂದೆ ಹಾಗೂ ಸಹೋದರ ಕೊಲೆ ಮಾಡಿ ಮನೆಯ ಮತ್ತೊಂದು ಭಾಗದಲ್ಲಿ ಮೋಹನ್ ಮಲಗಿದ್ದ. ಬಳಿಕ ಅಪ್ಪ ಹಾಗೂ ಅಣ್ಣನನ್ನ ಕೊಲೆ ಮಾಡಿದ್ದೇನೆ. ನನಗೂ ಏಟಾಗಿದೆ ಬಂದು ಆಸ್ಪತ್ರೆಗೆ ಸೇರಿಸು ಎಂದು ಅಕ್ಕನಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಇದರಿಂದ ಗಾಬರಿಗೊಂಡ ಸಹೋದರಿ ಊರಿಗೆ ಬಂದಿದ್ದರು.

LEAVE A REPLY

Please enter your comment!
Please enter your name here