ವಿಜಯ ಕಾಲೇಜು, ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಇದರ ಆಶ್ರಯದಲ್ಲಿ ಲೈನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ಇವರ ಸಹಕಾರದೊಂದಿಗೆ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಗಾರ ವನ್ನು ಹಮ್ಮಿಕೊಳ್ಳಲಾಯಿತು .
ಲೈನ್ಸ್ ಕ್ಲಬ್ ಇನ್ಸ್ಪೈರ್ ಬಪ್ಪನಾಡಿನ ಅಧ್ಯಕ್ಷರಾದ ಲ. ಅನಿಲ್ ಕುಮಾರ್ ಇವರು ಮಾತನಾಡಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಅರಿವು ತುಂಬಾ ಅಗತ್ಯವಿದೆ ಹಾಗೂ ವಿದ್ಯಾರ್ಥಿನಿಯರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ಇದರ ಪ್ರಥಮ ಉಪಾಧ್ಯಕ್ಷರಾದ ಲ. ಪುಷ್ಪ ರಾಜ ಚೌಟ ಸಂಪನ್ಮೂಲ ವ್ಯಕ್ತಿಯಾಗಿ, ಮಕ್ಕಳ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ. ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದರು. ಲೈನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇದರ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ್ ಹೆಬ್ಬಾರ್ , ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅರುಣ್ ಕುಮಾರ್, ಸುಧೀರ್ ಏನ್ ಬಾಳಿಗ, ಪ್ರಣವ್ ಶರ್ಮಾ, ಪ್ರತಿಭಾ ಹೆಬ್ಬಾರ್, ಸೌಮ್ಯ ಅನಿಲ್ ಉಪಸ್ಥಿತರಿದ್ದರು.
ಸಹಯೋಜನಾಧಿಕಾರಿ ಶರ್ಮಿಳಾ ರಾಜೇಶ್ ಸ್ವಾಗತಿಸಿದರು, ಕು.ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ರಶ್ಮಿ ಪ್ರಾರ್ಥಿಸಿ, ಕಾರ್ಯದರ್ಶಿ ರಿತೇಶ್ ವಂದಿಸಿದರು.

