ಮೂಡುಬಿದಿರೆ ತಾಲೂಕಿನ ನಿಡ್ಡೋಡಿ ಮನೆಯೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರಿಬ್ಬರಿಗೆ ಸಾಮೂಹಿಕ ಅತ್ಯಾಚಾರವೆಸಗಲು ತಯಾರಿ ನಡೆಸುತ್ತಿದ್ದ ನಾಲ್ವರು ದುಷ್ಕರ್ಮಿಗಳನ್ನು ಸಮಯ ಪ್ರಜ್ಞೆಯನ್ನು ಉಪಯೋಗಿಸಿ ಬಂಧಿಸಿದ ಮೂಡುಬಿದಿರೆ ಪೋಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಪೋಲೀಸ್ ಸಿಬ್ಬಂದಿಗಳನ್ನು ಜನವಾದಿ ಮಹಿಳಾ ಸಂಘಟನೆ ಮೂಡುಬಿದ್ರಿ ತಾಲೂಕು ಸಮಿತಿಯು ಅಭಿನಂದನೆ ಸಲ್ಲಿಸಿ ಮನವಿ ನೀಡಲಾಯಿತು.
ವಿಷಯ ತಿಳಿದ ಕೊಡಲೇ ಅ ೧೪ ರಂದು ಸಂಘಟನೆಯ ಉನ್ನತ ಮಟ್ಟದ ನಿಯೋಗವು ಮನವಿಯನ್ನು ಪೋಲೀಸ್ ನಿರೀಕ್ಷಕರಿಗೆ ನೀಡಿ ಆರೋಪಿತ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಲಾಯಿತು.
ನಿಯೋಗದಲ್ಲಿ ಜನವಾದಿ ಮಹಿಳಾ ಸಂಘಟನೆ ತಾಲೂಕು ಕಾರ್ಯದರ್ಶಿ ಲಕ್ಷಿö್ಮ, ತಾಲೂಕು ಸಮಿತಿಯ ಸದಸ್ಯೆಯರಾದ ಗಿರಿಜ, ರಕ್ಷ ಇದ್ದರು. ಸಿಪಿಐ ಪಕ್ಷ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಸಂತ ಆಚಾರಿ ನಿಯೋಗದೊಂದಿಗೆ ಉಪಸ್ಥಿತರಿದ್ದರು.
Home Uncategorized ಅಪ್ರಾಪ್ತ ಬಾಲಕಿಯರ ರಕ್ಷಣೆ: ಪೊಲೀಸ್ ಅಧಿಕಾರಿಗಳ ತಕ್ಷಣದ ಕ್ರಮಕ್ಕೆ ಜನವಾದಿ ಮಹಿಳಾ ಸಂಘಟನೆಯಿಂದ ಪ್ರಶಂಸೆ