ಮತಕಳ್ಳತನ ದೇಶಕ್ಕೆ ಅಪಾಯಕಾರಿ ಕ್ರಮ ಇದನ್ನು ಖಂಡಿಸಿಐವನ್‌ ಡಿʼಸೋಜಾ ನೇತೃತ್ವದಲ್ಲಿ ಮಲ್ಲಿಕಟ್ಟೆ ಮಾರುಕಟ್ಟೆ ಬಳಿ ಪ್ರತಿಭಟನೆ

0
17

ಮಂಗಳೂರು ನಗರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ವೋಟ್‌ ಚೋರ್‌ ಗದ್ದಿ-
ಚೋಡ್‌ ಕಾರ್ಯಕ್ರಮವನ್ನು ಮಲ್ಲಿಕಟ್ಟೆ ಮಾರುಕಟ್ಟೆಯ ಬಳಿ ಸಾರ್ವಜನಿಕ
ಸಭೆಯನ್ನು ನಡೆಸಲಾಯಿತು. ಮತ್ತು ಈ ಸಾರ್ವಜನಿಕ ಸಭೆಯಲ್ಲಿ ವೋಟ್‌ ಚೋರ್‌
ಗದ್ದಿ ಚೋಡ್‌ ಯಾರು ಮತಗಳ್ಳತನ ಮಾಡಿದ್ದಾರೆ ಅವರು ಹುದ್ದೆಯಿಂದ ತೊಲಗಿ
ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಘೋಷಣೆಯೋಂದಿಗೆ ಕಾರ್ಯಕ್ರಮವನ್ನು
ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಜನ ಬಂದು ತಮ್ಮ ಸಹಿಯನ್ನು
ಮಾಡುವ ಮೂಲಕ ಪ್ರತಿಪಕ್ಷ ನಾಯಕರಾಗಿರುವ ರಾಹುಲ್‌ ಗಾಂಧಿಯವರ
ಹೋರಾಟಕ್ಕೆ ಬೆಂಬಲವನ್ನು ಸೂಚಿಸಲಾಯ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ
ಶ್ರೀ ಐವನ್‌ ಡಿʼಸೋಜಾ ಇವರು, ಮತಗಳ್ಳತನ ಒಂದು ಅಘಾತಕಾರಿ ಬೆಳವಣಿಗೆ
ಪ್ರತಿಯೊಬ್ಬರ ಮತವನ್ನು ಕಸಿದುಕೊಳ್ಳುವ ಕ್ರಮವು ಈ ದೇಶದಲ್ಲಿ
ಕಾನೂನುಬಾಹಿರವಾದದ್ದು ಬಿ.ಆರ್‌ ಅಂಬೇಡ್ಕರ್‌ ಕೊಟ್ಟದಂತಹ ಸಂವಿಧಾನದಲ್ಲಿ
ಪ್ರತಿಯೊಬ್ಬರು ಒಂದು ಮತದಾನವನ್ನು ನೀಡುವುದರ ಮೂಲಕ ಪ್ರತಿಯೊಬ್ಬರ
ಮತದಾನವು ಒಂದೇ ಆಗಿರುವುದು ಪ್ರಜಾಪ್ರಭುತ್ವದ ವೈಭವವಾಗಿದೆ. ಇದನ್ನು
ಸಹಿಸದ ಬಿಜೆಪಿ ಧರ್ಮ-ಜಾತಿ ಮದ್ಯಕ್ಕೆ ತರುವ ಮೂಲಕ ಜನರಲ್ಲಿ ಕಂದಕವನ್ನು

ಏರ್ಪಾಡುಮಾಡಿ ಅಭಿವೃದ್ದಿ ಕೆಲಸಗಳನ್ನು ನಡೆಸದೇ ಮತವನ್ನು ಕಳ್ಳತನ ಮಾಡಿ
ಮಹಾರಾಷ್ಟ್ರ ಗುಜರಾತ್‌ ಮುಂತಾದ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ಮೂಲಕ ಈ
ದೇಶದಲ್ಲಿ ಮತ ಕಳ್ಳತನದ ಮೂಲಕವೇ ಅಧಿಕಾರಕ್ಕೆ ಬಂದಿರುವುದು ತುಂಬಾ
ಸ್ವಷ್ಟವಾಗಿ ಕಾಣುತ್ತದೆ. ಪ್ರಾರಂಭದಲ್ಲಿ 150ಕ್ಕೂ ಅಧಿಕ ಮಂದಿ ಬಂದು ಸ್ವಯಂ
ಪ್ರೇರಿತರಾಗಿ ಸಹಿಯಯನ್ನುಮಾಡುವುದರ ಮೂಲಕ ರಾಹುಲ್‌ ಗಾಂಧಿಯವರ
ಹೋರಾಟವನ್ನು ಬೆಂಬಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಮನಪಾ ಸದಸ್ಯರು
ನವೀನ್ ಡಿಸೋಜಾ, ಪ್ರಕಾಶ್ ಸಾಲಿಯಾನ್, ಅಶೋಕ್ ಡಿ.ಕೆ, ಪ್ರೇಮ್ ಬಳ್ಳಲ್ಬಾಗ್,
ತನ್ವೀರ್ ಶಾ, ಸತೀಶ್ ಪೆಂಗಲ್, ಕಾಂಗ್ರೆಸ್ ನಾಯಕರಾದ, ಗಿರೀಶ್ ಶೆಟ್ಟಿ, ಕಲಾ
ಡಿ.ರಾವ್, ಪದ್ಮನಾಭ ಅಮೀನ್, ಮಂಜುಳಾ ನಾಯಕ್, ಟಿ.ಕೆ. ಸುಧೀರ್, ಜೇಮ್ಸ್
ಪ್ರವೀಣ್, ಕಿರಣ್‌ ಜೇಮ್ಸ್, ಟಿ.ಸಿ. ಗಣೇಶ್, ಲಿಯಾಕತ್, ಆಲ್ಸ್ಟನ್, ಮೀನಾ ಟೆಲ್ಲಿಸ್‌
ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here