ನೇಪಾಳ: ರಾಜಧಾನಿ ಕಠ್ಮಂಡುವಿನ ಹೃದಯಭಾಗದಲ್ಲಿರುವ ಐತಿಹಾಸಿಕ ಅರಮನೆ ಬೆಂಕಿಗೆ ಆಹುತಿಯಾಗಿದೆ. ಏಷ್ಯಾದ ಅತಿ ದೊಡ್ಡ ಅರಮನೆಗಳಲ್ಲಿ ಒಂದು ಎನ್ನಲಾಗುತ್ತಿದ್ದು., ಬೆಂಕಿ ತೀವ್ರವಾಗಿ ಹರಡಿದ ಕಾರಣ ಅರಮನೆಯ ಸಂಪೂರ್ಣ ಹಾನಿಗೊಂಡಿವೆ. ಬೆಂಕಿ ನಿಯಂತ್ರಣಕ್ಕೆ ಅಗ್ನಿಶಾಮಕ ದಳ ಮತ್ತು ಸೇನಾ ಪಡೆಗಳು ಪ್ರಯತ್ನ ಪಡುತ್ತಿವೆ . ಆದರೆ ಬೆಂಕಿಯ ಆರ್ಭಟದಿಂದ ಪ್ರಮುಖ ಕಟ್ಟಡಗಳು ನಾಶವಾಗಿರುವುದು ದೃಶ್ಯಗಳಲ್ಲಿ ಮಾಧ್ಯಮಗಳಲ್ಲಿ ಸ್ಪಷ್ಟವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧ ಮತ್ತು ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಗಳ ನಡುವೆ ಈ ಘಟನೆ ನಡೆದಿದೆ. ಜನರ ಆಕ್ರೋಶದಿಂದ ಕಠ್ಮಂಡುವಿನಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಸರ್ಕಾರ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. 1908 ರಲ್ಲಿ ನಿರ್ಮಾಣವಾದ ಈ ಅರಮನೆಯಲ್ಲಿ ಸುಮಾರು 1,700 ಕೊಠಡಿಗಳು 7 ಮಹಡಿಗಳು, ಏಷ್ಯಾದ ಅತಿ ದೊಡ್ಡ ಅರಮನೆಗಳಲ್ಲಿ ಇದೂ ಒಂದು.
ಯುವಜನರ ನೇತೃತ್ವದಲ್ಲಿ ನಡೆದ ವಿರೋಧ ಪ್ರತಿಭಟನೆಗಳು ಸೋಮವಾರದಿಂದ ಆರಂಭಗೊಂಡು, ಮಂಗಳವಾರದಂದು ಗಂಭೀರ ಹಿಂಸಾಚಾರಕ್ಕೆ ತಲುಪಿದವು. ಸಾಮಾಜಿಕ ಮಾಧ್ಯಮಗಳನ್ನು ತಾತ್ಕಾಲಿಕವಾಗಿ ನಿಷೇಧಿಸುವ ಸರ್ಕಾರದ ಕ್ರಮಕ್ಕೆ ವಿರೋಧವಾಗಿ, ಪ್ರತಿಭಟನಾಕಾರಿಗಳು ಸರ್ಕಾರದ ಕಟ್ಟಡಗಳನ್ನು ಬೆಂಕಿಗೆ ಆಹುತಿಯಾಗಿಸಿದರೆ, ಕೋರ್ಟ್ ಕಟ್ಟಡಗಳು, ಪೊಲೀಸ್ ಠಾಣೆಗಳು ಮತ್ತು ರಾಜಕೀಯ ನಾಯಕರ ನಿವಾಸಗಳನ್ನು ಗುರಿಯಾಗಿಸಿತು. ಈ ಹಿಂಸಾಚಾರದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಠಿಣ ಪೊಲೀಸ್ ಕ್ರಮಗಳು, ರಬ್ಬರ್ ಗುಂಡುಗಳು ಮತ್ತು ಕಣ್ಣೀರು ಗ್ಯಾಸ್ ಬಳಕೆಗೂ ಕಾರಣವಾಗಿದೆ.
ನೇಪಾಳದ ಪ್ರಧಾನಿ ಪ್ರತಿಭಟನಾಕಾರಿಗಳ ಒತ್ತಡಕ್ಕೆ ಒಳಗಾಗಿ, ಮಂಗಳವಾರ ರಾಜೀನಾಮೆ ಸಲ್ಲಿಸಿದರು. ಅವರ ರಾಜೀನಾಮೆ ನಂತರ, ಅವರು ಕಾಣೆಯಾಗಿದ್ದಾರೆ. ಈ ಅವ್ಯವಸ್ಥೆಯ ಮಧ್ಯದಲ್ಲಿ, ಸೇನೆ ಕಠ್ಮಾಂಡುವಿನಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕಟ್ಟಡವನ್ನು ಬೆಂಕಿಗೆ ಆಹುತಿಯಾಗಿಸಿದ ನಂತರ, ಸೇನೆ ಕಟ್ಟಡವನ್ನು ರಕ್ಷಿಸಲು ನಿಯೋಜಿಸಲಾಗಿದೆ.
ಪ್ರತಿಭಟನಾಕಾರರು, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿಯನ್ನು ತಾತ್ಕಾಲಿಕ ಪ್ರಧಾನಿಯಾಗಿ ನೇಮಿಸಲು ಪ್ರಸ್ತಾಪಿಸಿದ್ದಾರೆ. ಅವರು, ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಿದ್ದು, ಜನಪ್ರಿಯತೆ ಮತ್ತು ನಂಬಿಕೆಯನ್ನು ಹೊಂದಿದ್ದಾರೆ. ಆದರೆ, ಅವರ ನೇಮಕವನ್ನು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದೆ.
ಕಠ್ಮಾಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ, ಇದರಿಂದ ವಿಮಾನಯಾನ ಸೇವೆಗಳು ಪ್ರಭಾವಿತವಾಗಿವೆ. ಭದ್ರತಾ ಕಾರಣಗಳಿಂದಾಗಿ, ಭಾರತೀಯ ಪ್ರವಾಸಿಗರು ನೆಪಾಳದಿಂದ ಹೊರ ಹೋಗಲು ಪ್ರಯತ್ನಿಸುತ್ತಿದ್ದಾರೆ. ಭದ್ರತಾ ಸಿಬ್ಬಂದಿ, ಜೈಲು ಮುರಿದು ಹೋಗಲು ಯತ್ನಿಸಿದವರನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಂಡಿದ್ದಾರೆ. ಭದ್ರತಾ ಪರಿಸ್ಥಿತಿ ಗಂಭೀರವಾಗಿರುವುದರಿಂದ, ಭಾರತೀಯ ವಿದೇಶಾಂಗ ಸಚಿವಾಲಯವು ನೇಪಾಳಕ್ಕೆ ಪ್ರವಾಸ ಹೋಗುವ ಜನರನ್ನು ತಾತ್ಕಾಲಿಕವಾಗಿ ಹೋಗದಂತೆ ಸಲಹೆ ನೀಡಿದೆ.
ವರದಿ ÷ ಮಂದಾರ ರಾಜೇಶ್ ಭಟ್

