ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಗೆ ಪ್ರಾಂತ್ಯ ಅಧ್ಯಕ್ಷರ ಭೇಟಿ

0
65

ಮುಲ್ಕಿ : ಮುಚ್ಚುರು ಮಿಥಿಲಾ ಸಭಾಭವನ ಇಲ್ಲಿ ಲಯನ್ಸ್ ಕ್ಲಬ್ ಮಚ್ಚೂರು ನೀರುಡೆ ಲಯನ್ಸ್ ಕ್ಲಬ್ ಗುರುಪುರ ಕೈಕಂಬ ಹಾಗೂ ಇನ್ಸ್ಪೈರ್ಗೆ ಪ್ರಾಂತ್ಯ ಅಧ್ಯಕ್ಷರ ಬೇಟಿ ಕಾರ್ಯಕ್ರಮ ಹಾಗೂ ವಲಯ ಅಧ್ಯಕ್ಷರ ಭೇಟಿ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.
ವಲಯ ಅಧ್ಯಕ್ಷರಾದ ಮೇಲ್ವಿನ್ ಸಲ್ದಾನ ಮಾತನಾಡಿ ನನ್ನ ವಲಯದ ನಾಲ್ಕು ಕ್ಲಬ್ ಗಳು ಉತ್ತಮ ಸೇವ ಕಾರ್ಯಕ್ರಮಗಳನ್ನು ಮಾಡಿ ನಮ್ಮ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ನಿಮ್ಮ ಸೇವಾ ಕಾರ್ಯಕ್ರಮಗಳು ಹೀಗೆ ಜರಗಲಿ ಎಂದರು ಬಳಿಕ ಮಾತನಾಡಿದ ಪ್ರಾಂತ್ಯ ಅಧ್ಯಕ್ಷರಾದ ಜಗದೀಶ್ ಚಂದ್ರ ಡಿಕೆ ಅತ್ಯುತ್ತಮ ಪ್ರಾಂತ್ಯ ವನ್ನು ಹೊಂದಿದ್ದಕ್ಕಾಗಿ ತುಂಬಾ ಹೆಮ್ಮೆ ಪಡುತ್ತೇನೆ ನನ್ನ ಪ್ರಾಂತ್ಯದ ಎಲ್ಲಾ 9 ಕ್ಲಬ್ ಗಳು ಅತ್ಯುತ್ತಮವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ವಿಶೇಷವಾಗಿ ಈ ದಿನ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾಕ್ಟರ್ ಮೇಲ್ವಿನ್ ಡಿಸೋಜಾ ಹಾಗೂ ನಿಕಟಪೂರ್ವ ಪ್ರಾಂತ್ಯ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಶುಭಶಂಶನೆ ಗೈದರು ವೇದಿಕೆಯಲ್ಲಿ ಪ್ರತಿಭಾ ಹೆಬ್ಬಾರ್ ಲಯನ್ಸ್ ಕ್ಲಬ್ ಮುಚ್ಚೂರು ನೀರುಡೇ ಅಧ್ಯಕ್ಷರಾದ ಮುರಳಿದಾಸ್, ಕಾರ್ಯದರ್ಶಿ ರೋಷನ್ ನೋರನ್ನ ಕೋಶಾಧಿಕಾರಿ ರಾಮ್ ಮೋಹನ್ ಶೆಟ್ಟಿಗಾರ್ ಗುರುಪುರ ಕೈಕಂಬದ ಅಧ್ಯಕ್ಷರಾದ ಜೇಸನ್ ಪ್ಯಾರಿಸ್ ಕೋಶಾಧಿಕಾರಿ ಜೇಮ್ಸ್ ಮೆಂಡ ಬಪ್ಪನಾಡು ಇನ್ಸ್ಪರ ಅಧ್ಯಕ್ಷ ಅನಿಲ್ ಕುಮಾರ್ ಕಾರ್ಯದರ್ಶಿ ಅಶ್ವಿನಿ ಶರ್ಮ ಕೋಶಾಧಿಕಾರಿ ಸಂತೋಷ್ ಕುಮಾರ್ ಸ್ವರ್ಣ ಮಹೋತ್ಸವ ಸಂಭ್ರಮದ ಮೂಡಬಿದ್ದರೆ ಅಧ್ಯಕ್ಷರಾದ ಶಿವಪ್ರಸಾದ್ ಹೆಗಡೆ ಅಲಂಗಾರಿನ ಅಮಿತ್ ಡಿಸಿಲ್ವ, ಬೆಳುವಾಯಿಯ ಜೆನೆಟ್, ವೇಣುರಿನ ಸುಧೀರ್, ಬೆಳ್ತಂಗಡಿಯ ಮುರಳಿ ಬಲಿಪ ಮೊದಲಾದವರು ಉಪಸ್ಥಿತರಿದ್ದರು ಲಯನ್ ಓಸ್ವಾಲ್ಡ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here