ಪ್ರತ್ಯೇಕ ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಹಾಕಿ ಸಮಾಜದ ಶಾಂತಿ ಕೆಡಿಸಲು ಯತ್ನಿಸಿದ ಆರೋಪದಲ್ಲಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಹೆಜಮಾಡಿ ಗ್ರೀನ್‌ಹೌಸ್ ಎನ್.ಎಸ್. ರೋಡ್ ನಿವಾಸಿ ಮೊಹಮ್ಮದ್ ಅಸ್ಲಾಂನ (23) ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಇಡ್ಯಾ ಗ್ರಾಮದ ಕಾಟಿಪಳ್ಳ ಆಶ್ರಯ ಕಾಲೊನಿ ನಿವಾಸಿ ಚೇತನ್ (20) ಮತ್ತು ನಿತಿನ್ ಅಡಪ (23)ನನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಫರಂಗಿಪೇಟೆ ಅರ್ಕುಳ ಕೊಪ್ಪಲ್ ಹೌಸ್‌ನ ರಿಯಾಝ್ ಇಬ್ರಾಹಿಂ (30) ಮತ್ತು ಕೂಳೂರು ಕಸಬಾ ಬೆಂಗ್ರೆ ಕಿಲೇರಿಯಾ ಮಸೀದಿ ಬಳಿಯ ನಿವಾಸಿ ಜಮಾಲ್ ಝಾಕೀರ್ (21) ಹಾಗೂ ಹಳೆಯಂಗಡಿ ಕೊಳವೈಲ್‌ನ ಗುರುಪ್ರಸಾದ್‌ನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.