ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಮಾದಕ ವ್ಯಸನಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ

0
50

ವರದಿ ರಾಯಿ ರಾಜ ಕುಮಾರ

ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ,ಮಂಗಳೂರು ನಗರ ಪೊಲೀಸ್ ಮತ್ತು ರೋಶನಿ ನಿಲಯ ವಿದ್ಯಾ ಸಂಸ್ಥೆ ಗಳ ಸಹಯೋಗದೊಂದಿಗೆ ಸ್ಟೇಟ್ ಬ್ಯಾಂಕ್ ನ ಕೇಂದ್ರ ಬಸ್ ನಿಲ್ದಾಣದ ಬಳಿ ಬುಧವಾರ ಮಾದಕ ದ್ರವ್ಯ ವ್ಯಸನಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ ಪಿ.ಉಮೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಎಸಿಪಿ ರವೀಶ್ ನಾಯ್ಕ್ ಮಾತನಾಡುತ್ತಾ,ಮಾದಕ ದ್ರವ್ಯ ಬಳಕೆ ಯಿಂದ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು‌. ಮಾಡಿ.ಮಾದಕ ದ್ರವ್ಯ ಸೇವನೆ ಒಂದು ಪಿಡುಗು. ಮಕ್ಕಳು ಮಾದಕ ದ್ರವ್ಯ ಸೇವನೆ ಮಾಡುವವರು ಬಂದರೆ ಅವರ ಮಾಹಿತಿ ಗೌಪ್ಯವಾಗಿಟ್ಟು ಅವರಿಗೆ ಚಿಕಿತ್ಸೆ ಗೆ ಸಹಾಯ ಮಾಡಲಾಗುವುದು.ನಗರದಲ್ಲಿಮಾದಕ ಪದಾರ್ಥಗಳ ಪೂರೈಕೆ ಮಾಡುವ ವರ ವಿರುದ್ಧ ಪ್ರಕರಣ ದಾಖಲು ಮಾಡಿ ಕ್ರಮ ಕೈ ಗೊಳ್ಳಲಾಗುತ್ತಿದೆ.ಈ ನಿಟ್ಟಿನಲ್ಲಿ ಸಾರ್ವಜ ನಿಕರ ಸಹಕಾರ ಅಗತ್ಯ ಎಂದರು.

ಜೊತೆಗೆ ಸೈಬರ್ ಕ್ರೈಮ್ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ.ಈ ಬಗ್ಗೆ ಸಾರ್ವಜನಿಕರು ಭಯ ಪಡಬಾರದು ಧೈರ್ಯ ವಾಗಿ ಎದುರಿಸಬೇಕು.ಪೊಲೀಸರ ಸಹಾಯ ಪಡೆದುಕೊಳ್ಳಬೇಕು.ಇದುವರೆಗೆ ಸೈಬರ್ ಕ್ರೈಮ್ ಗೆ ಸಂಬಂಧಿಸಿದಂತೆ ಮಂಗಳೂರಿನ 6500 ಜನರ ಮೇಲೆ ಕೇಸ್ ಇದೆ. ಲೋನ್ ಆಫ್, ಗೇಮ್ ಆ್ಯಫ್ ಮೂಲಕ ಜನರನ್ನು ವಂಚಿಸಿ ಹಣ ಪಡೆಯುವ ವಂಚನೆ ಜಾಲ ಇದೆ.ಜೊತೆಗೆ ಬ್ಲಾಕ್ ಮೇಲ್ ಮಾಡುವವರು, ಡಿಜಿಟಲ್‌ ಅರೆಸ್ಟ್, ಪೊಲೀಸ್ ಡ್ರೆಸ್ ಹಾಕಿ ವಂಚಿಸುವವರು, ಪೋನ್ ಮಾಡುವವರು ಇದ್ದಾರೆ.

ಈ ರೀತಿಯ ಸಮಸ್ಯೆ ಇದ್ದರೆ 1930 ಗೆ ಪೋನ್ ಮಾಡಿ ಪೊಲೀಸರ ಸಹಾಯ ಪಡೆದು ಕೊಳ್ಳಬಹುದು. ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಮಾದಕ ವ್ಯಸನದ ದುಷ್ಪರಿಣಾಮ ತಿಳಿಹಳಿದರು. ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಜನ ಜಾಗೃತಿ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಎಸಿಪಿ ಪ್ರತಾಪ್ ಸಿಂಗ್ ಥೋರಟ್ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್,ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಪೂರ್ವಾಧ್ಯಕ್ಷರಾದ ಜಯರಾಮ ಶೇಖ ,ಪ್ರದಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್,ಜೊತೆ ಕಾರ್ಯ ದರ್ಶಿ ರಾಜೇಶ್ ಟಿ,ಕೋಶಾಧಿಕಾರಿ ಜೊಯೆಲ್ ದಿಲ್ ರಾಜ್ ಫರ್ನಾಂಡೀಸ್ ಮೊದಲಾದವರು ಉಪಸ್ಥಿ ತರಿದ್ದರು. ಪ್ರದಾನ ಕಾರ್ಯದರ್ಶಿ ರಾಮ ಚಂದ್ರ ಪಿಲಾರ್ ವಂದಿಸಿದರು.
.

LEAVE A REPLY

Please enter your comment!
Please enter your name here