ಡಿ.20 : ಶುಭದರಾವ್ ಕಾರ್ಕಳ ಅವರಿಂದ ‘ಸಾರ್ವಜನಿಕ ಕೃತಜ್ಞತಾ ಸಭೆ’

0
68

ಕಾರ್ಕಳ: ಶುಭದರಾವ್ ಅವರು ಸಾರ್ವಜನಿಕ‌ರ ಸೇವೆಗೆ ಬದುಕನ್ನು ಮುಡಿಪಾಗಿಡಬೇಕು ಎನ್ನುವ ಮಹಾದಸೆಯಿಂದ 2007ರಲ್ಲಿ ಕಾರ್ಕಳ ಪುರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿ ,ಅಂದಿನಿಂದ ಸತತ‌ 18 ವರ್ಷಗಳ ಪುರಸಭೆಯ ಸದಸ್ಯರಾಗಿ, ಒಂದು ವರ್ಷ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸಾರ್ವಜನಿಕ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಜನಪರ ಕೆಲಸ ಹಾಗೂ ಹೋರಾಟವನ್ನು ಆಶೀರ್ವಾದದಿಂದ ಮಾಡುತ್ತಾ ಬಂದಿರುತ್ತಾರೆ.

ಸೇವೆಯ ಸಂದರ್ಭದಲ್ಲಿ ಯಾವುದೇ ತಪ್ಪುಗಳು ನಡೆಯದಂತೆ ಎಚ್ಚರವಹಿಸಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಂಡಿರುತ್ತಾರೆ ಎಂಬ ಆತ್ಮತೃಪ್ತಿ ಯನ್ನು ,ಜವಾಬ್ದಾರಿಯ ಪಯಣದಲ್ಲಿ ಸಹಕರಿಸಿ ಮಾರ್ಗದರ್ಶನ ಮಾಡಿ ಆಶೀರ್ವದಿಸಿದ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿರುತ್ತಾರೆ.

ಆ ನೆಲೆಯಲ್ಲಿ ಡಿಸೆಂಬರ್ 20 ರಂದು‌‌ ಸಂಜೆ‌ 6:30ಕ್ಕೆ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿ ಇರುವ ಶುಭದರಾವ್ ಅವರ ಮನೆಯಲ್ಲಿ ‘ಸಾರ್ವಜನಿಕ ಕೃತಜ್ಞತಾ ಸಭೆ’ಯನ್ನು ಆಯೋಜಿಸಿದ್ದಾರೆ. ಈ ಸಭೆಯಲ್ಲಿ ಪೌರ ಕಾರ್ಮಿಕರಿಗೆ ಗೌರವಾರ್ಪಣೆ, ವೃದ್ದಾಶ್ರಮಕ್ಕೆ ಧನಸಹಾಯ ವಿತರಣೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here