ಸಾರ್ವಜನಿಕ ಶ್ರೀ ಶನಿ ಪೂಜೆ ಅಮನಬೆಟ್ಟು ಧ್ವಜಾರೋಹಣ

0
1

ಮೂಡುಬಿದಿರೆ: ಇಲ್ಲಿನ ಅಮನಬೆಟ್ಟು ಮಾರ್ನಾಡು ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್ (ರಿ) ಆಶ್ರಯದಲ್ಲಿ ನಡೆದ ನಾಲ್ಕನೇ ವರ್ಷದ ಸಾರ್ವಜನಿಕ ಶನಿ ಪೂಜಾ ಅಂಗವಾಗಿ ಬೆಳುವಾಯಿ ಸಿ ಎ ಬ್ಯಾಂಕ್ ಉಪಾಧ್ಯಕ್ಷೆ ಶ್ರೀಮತಿ ಉಷಾ ಡಿ ಪೈ ಯವರು ಸನಾತನ ಸಂಕೇತವಾದ ಕೇಸರಿ ಧ್ವಜಾರೋಹಣವನ್ನು ನೆರವೇರಿಸಿ ಶನಿ ಪೂಜಾ ಧಾರ್ಮಿಕ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಎಂ ದಯಾನಂದ ಪೈ ಅಲಂಗಾರು ,ಅಧ್ಯಕ್ಷ ರಮೇಶ್ ಪಿ ಶೆಟ್ಟಿ,ಪ್ರದಾನ ಕಾರ್ಯದರ್ಶಿ ಸುರೇಶ್ ಪೂಜಾರಿ, ಖಜಾಂಚಿ ಸಂದೀಪ್ ಆಚಾರ್ಯ, ಸಂಚಾಲಕ ಭವಿಷ್ಯತ್ ಕೋಟ್ಯಾನ್, ರಾಜೇಶ್ವರಿ ನೇಷನಲ್ ಪಬ್ಲಿಕ್ ಸ್ಕೂಲ್ ಸಾಣೂರಿನ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಸೂರಜ್ ಜೈನ್ ಮಾರ್ನಾಡು, ರಾಜೇಶ್ ಪುತ್ರನ್, ಸಂತೋಷ್, ವೈಷ್ಣವ ಹೆಗ್ಡೆ, ದಯಾನಂದ ಹೆಗ್ಡೆ, ರಮೇಶ್ ಹೆಗ್ಡೆ,, ಕಿಶೋರ್ ಭಂಡಾರಿ,ಭರತ್ ಶೆಟ್ಟಿ,ಸಂತೋಷ್ ಕೋಟ್ಯಾನ್, ಪಾಪಣ್ಣ, ಸುರೇಂದ್ರ ಅಡ್ಕರೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here