ಪುಣಚ-ತೋರಣಕಟ್ಟೆ ಒಕ್ಕೂಟಗಳ ವಾರ್ಷಿಕೋತ್ಸವ; ಆಟಿದಕೂಟ ಕಾರ್ಯಕ್ರಮ

0
17

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕು ಅಳಿಕೆ ವಲಯದ ಪುಣಚ ಮತ್ತು ತೋರಣಕಟ್ಟೆ ಒಕ್ಕೂಟದ 20ನೇ ವರ್ಷದ ವಾರ್ಷಿಕೋತ್ಸವ ಹಾಗೂ ಆಟಿದ ಕೂಟ ಕಾರ್ಯಕ್ರಮವು ಪುಣಚದ ಶ್ರೀ ದೇವಿ ವಿದ್ಯಾ ಕೇಂದ್ರ ದೇವಿನಗರದ ಜ್ಞಾನ ಭಾರತಿ ಸಭಾಂಗಣದಲ್ಲಿ ನಡೆಯಿತು.

ಒಕ್ಕೂಟದ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಶ್ರೀದೇವಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ತದ ನಂತರ ಆಟಿ ಕಳೆಂಜ ಪ್ರಾತ್ಯಕ್ಷಿಕೆ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳಿಕೆ ವಲಯದ ಅಧ್ಯಕ್ಷರಾದ ರಾಜೇಂದ್ರ ರೈ ಅವರು ವಹಿಸಿದ್ದರು. ಉದ್ಘಾಟನೆಯನ್ನು ವಿಟ್ಲ ಕೇಂದ್ರ ಒಕ್ಕೂಟದ ಅಧ್ಯಕ್ಷ ರಾದ ನವೀನ್ ಚಂದ್ರ ಕಣಂತೂರು ಮಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ವಿಸ್ತಾರ ಹಾಗೂ ಪ್ರಯೋಜನಗಳ ಬಗ್ಗೆ ಮಾತನಾಡಿ, ಶುಭ ಹಾರೈಸಿದರು. ಪುಣಚ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಉದಯಕುಮಾರ್ ದಂಬೆ ಇವರು ಯೋಜನೆಯ ಕಾರ್ಯಕ್ರಮಗಳು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಹಾಗೂ ಪಡೆದುಕೊಂಡ ಸಾಲವನ್ನು ಸದ್ವಿನಿಯೋಗ ಮಾಡಿ ಕಾಲಕ್ಕೆ ಸರಿಯಾಗಿ ಮರುಪಾವತಿ ಮಾಡುವಂತೆ ತಿಳಿಸಿದರು. ದೇವಿನಗರ ಶಾಲೆಯ ಮುಖ್ಯ ಶಿಕ್ಷಕಿ ರಜನಿ ಅವರು ಆಟಿ ತಿಂಗಳ ಮಹತ್ವದ ಬಗ್ಗೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಪುಣಚ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ ಬೈಲು ಗುತ್ತು ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಳಿಕೆ ವಲಯ ಮೇಲ್ವಿಚಾರಕರಾದ ಮೀನಾಕ್ಷಿ ಅವರು ಯೋಜನೆಯ ಮುಖಾಂತರ ನಡೆಯುವ ಸಮಾಜಮುಖಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ 20 ವರ್ಷ ಗಳಿಂದ ಶ್ರಮವಿನಿಮಯ ಮಾಡಿಕೊಂಡು ಬಂದ ತಂಡಗಳನ್ನು ಹಾಗೂ ಒಕ್ಕೂಟದ ಹಿರಿಯ ಸದಸ್ಯರನ್ನು ಗುರುತಿಸಲಾಯಿತು.

ವೇದಿಕೆಯಲ್ಲಿ ಸಾಲೆತ್ತೂರು ವಲಯ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷರಾದ ತುಳಸಿ, ಅಳಿಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷರಾದ ದೀಪಕ್ ತೋರಣಕಟ್ಟೆ ಒಕ್ಕೂಟದ ಅಧ್ಯಕ್ಷರಾದ ರಘು ನಾಯ್ಕ, ಸಾಲೆತ್ತೂರು ವಲಯದ ನಿಕಟಪೂರ್ವ ಅಧ್ಯಕ್ಷರಾದ ರಂಜಿತ್, ಶೌರ್ಯ ವಿಪತ್ತು ತಂಡದ ಸದಸ್ಯರು ಹಾಗೂ ಎರಡು ಒಕ್ಕೂಟದ 300 ಅಧಿಕ ಸದಸ್ಯರು ಉಪಸ್ಥಿತರಿದ್ದರು. ಸದಸ್ಯರು ಆಟಿ ತಿಂಗಳ ವಿಶೇಷ ತಿಂಡಿಗಳನ್ನು ತಂದಿದ್ದರು. ಪುಣೆಚ ಒಕ್ಕೂಟದ ವರದಿಯನ್ನು ಸೇವಾ ಪ್ರತಿನಿಧಿ ಕಾವ್ಯ ಪಿ ಮತ್ತು ತೋರಣಕಟ್ಟೆ ಒಕ್ಕೂಟದ ವರದಿಯನ್ನು ಸರಸ್ವತಿಯವರು ವಾಚಿಸಿದರು. ಸ್ವರ್ಣ ಜ್ಯೋತಿ ತಂಡದ ನಳಿನಿ ಸುವರ್ಣ ಸ್ವಾಗತಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ತೋರಣಕಟ್ಟೆ ಒಕ್ಕೂಟದ ಸದಸ್ಯರಾದ ಕವಿತಾ ಎಸ್ ನಾಯಕ್ ರವರು ಮಾಡಿದರು. ಅನಂತೆಶ್ವರ ಏ ಸಂಘದ ಸದಸ್ಯರಾದ ಅಮಿತಾರವರು ಧನ್ಯವಾದ ನೀಡುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here